ಕ್ರೀಡೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ರಾಷ್ಟ್ರೀಯ ಮಾರ್ಗಸೂಚಿಗೆ ಚಿಂತನೆ

0
Union-Minister-of-State-for-Youth-Affairs-and-Sports-Raksha-Khadse

ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಅವರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ನವದೆಹಲಿಯಲ್ಲಿ ರಾಷ್ಟ್ರೀಯ ಸಮಾಲೋಚನೆ ಆಯೋಜಿಸಿತ್ತು.

ವಿಜ್ಞಾನ ಭವನದಲ್ಲಿ ನಡೆದ ‘ಖೇಲ್ ಶಕ್ತಿ ರಾಷ್ಟ್ರೀಯ ಸಮಾಲೋಚನೆ’ಯಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವೆ ರಕ್ಷಾ ಖಡ್ಸೆ ಭಾಗವಹಿಸಿದ್ದರು. ಕ್ರೀಡೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸಲು ರಾಷ್ಟ್ರೀಯ ಮಾರ್ಗಸೂಚಿ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಎನ್‌ಸಿಡಬ್ಲ್ಯು ಅಧ್ಯಕ್ಷೆ ವಿಜಯ ರಹತ್ಕರ್, ಸದಸ್ಯರಾದ ನಿವೇದಿತಾ ಸುಬ್ರಮಣಿಯನ್, ಅರ್ಚನಾ ಮಿಶ್ರಾ ಹಾಗೂ ಕ್ರೀಡಾ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಮಹಾಂಕರ್ ಸೇರಿದಂತೆ ಹಲವು ಗಣ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಮಹಿಳಾ ಕ್ರೀಡಾಪಟುಗಳ ಸುರಕ್ಷತೆ, ಲೈಂಗಿಕ ಕಿರುಕುಳ ತಡೆಗಟ್ಟುವ (POSH) ನಿಯಮಗಳ ಅನುಷ್ಠಾನ, ಆರೋಗ್ಯ ರಕ್ಷಣೆ, ಮಾನಸಿಕ ಯೋಗಕ್ಷೇಮ, ಮಾತೃತ್ವ ಸೌಲಭ್ಯಗಳು ಮತ್ತು ಕ್ರೀಡಾ ಆಡಳಿತದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುವ ಕುರಿತು ಚರ್ಚೆ ನಡೆಯಿತು.

ಮಹಿಳಾ ಕ್ರೀಡಾಪಟುಗಳಿಗೆ ಸಾಂಸ್ಥಿಕ ಬೆಂಬಲ ಬಲಪಡಿಸುವುದು, ಅಸ್ಮಿತಾ ಮಹಿಳಾ ಲೀಗ್‌ನಂತಹ ಉಪಕ್ರಮಗಳನ್ನು ವಿಸ್ತರಿಸುವುದು ಹಾಗೂ ಜಿಲ್ಲಾ ಮತ್ತು ತಳಮಟ್ಟದಲ್ಲಿ ನೀತಿಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವನ್ನು ಪ್ರತಿನಿಧಿಗಳು ಒತ್ತಿಹೇಳಿದರು.

Leave a Reply

Your email address will not be published. Required fields are marked *