ಮಂತ್ರಾಲಯದಲ್ಲಿ ‘ರಾಘವ ಸರೋವರ’ಕ್ಕೆ ಶಂಕುಸ್ಥಾಪನೆ

0
Mantralaya

ಮಂತ್ರಾಲಯ: ನೀರು ಮತ್ತು ಆಮ್ಲಜನಕ ಪ್ರಕೃತಿ ನಮಗೆ ಉಚಿತವಾಗಿ ನೀಡಿರುವ ಅಮೂಲ್ಯ ಸಂಪತ್ತು. ಅವುಗಳ ಕೊರತೆ ಎದುರಾದಾಗ ಮಾತ್ರ ಅವುಗಳ ಮಹತ್ವ ಅರಿವಾಗುತ್ತದೆ. ಹೀಗಾಗಿ ಜಲಸಂರಕ್ಷಣೆ ಮತ್ತು ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಹೇಳಿದರು.

ಮಂತ್ರಾಲಯದಲ್ಲಿ ರಾಘವ ಸರೋವರ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ರಾಘವ ಸರೋವರದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೈಗಾರಿಕೀಕರಣ ಮತ್ತು ನಗರೀಕರಣದಿಂದ ವಾಯು ಹಾಗೂ ಜಲಮಾಲಿನ್ಯ ಹೆಚ್ಚುತ್ತಿದೆ. ಕೆರೆಗಳ ಸಂರಕ್ಷಣೆ, ಮಳೆನೀರು ಕೊಯ್ಲು, ಅಂತರ್ಜಲ ವೃದ್ಧಿ ಮತ್ತು ಗಿಡಮರಗಳನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದರು.

ನೀರನ್ನು ಭವಿಷ್ಯದ ಬಿಳಿ ಚಿನ್ನವೆಂದು ಪರಿಗಣಿಸಿ ಉಳಿಸಬೇಕು. ಇಂದು ನೀರನ್ನು ಸಂರಕ್ಷಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ನೀರು ಮತ್ತು ಹಸಿರು ಪರಿಸರವನ್ನು ಉಳಿಸಬಹುದು ಎಂದು ತಿಳಿಸಿದರು.

ರಾಘವ ಸರೋವರ ಯೋಜನೆಗೆ ₹25 ಲಕ್ಷ ದೇಣಿಗೆ ನೀಡಿದ ನಟ ಹಾಗೂ ನಿರ್ಮಾಪಕ ಮದನ್ ಪಾಟೀಲ್ ಅವರ ಸಮಾಜಮುಖಿ ಕಾರ್ಯವನ್ನು ಅಭಿನಂದಿಸಿದ ಅವರು, ದಾನಕ್ಕಿಂತ ಸಮಾಜದ ಬಗೆಗಿನ ಕಾಳಜಿ ಮುಖ್ಯ ಎಂದರು.

ಈ ಸಂದರ್ಭದಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಎಚ್‌ಎಎಲ್ ಅಧ್ಯಕ್ಷ ರಂಗನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *