ಇರಾನ್ ಯುದ್ಧವೇ ರಿಪಬ್ಲಿಕನ್ ಪಕ್ಷದ ಸೋಲಿಗೆ ಕಾರಣ: ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್

0
US-Vice-Presidentt-JD-Vance

ವಾಷಿಂಗ್ಟನ್: ಇರಾನ್ ಯುದ್ಧವೇ ರಿಪಬ್ಲಿಕನ್ ಪಕ್ಷದ ಚುನಾವಣಾ ಸೋಲಿಗೆ ಪ್ರಮುಖ ಕಾರಣ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ. 2024ರಲ್ಲಿ ಟ್ರಂಪ್‌ಗೆ ಮತ ಹಾಕಿದ್ದ ಅನೇಕರು 2026ರಲ್ಲಿ ಡೆಮಾಕ್ರಟಿಕ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಮತದಾರರ ಹಾಜರಾತಿ ಸಮಸ್ಯೆಯಾಗಿರಲಿಲ್ಲ. ರಿಪಬ್ಲಿಕನ್ ಬೆಂಬಲಿಗರು ಮತಗಟ್ಟೆಗೆ ಬಂದರೂ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಲಿಲ್ಲ ಎಂದು ವ್ಯಾನ್ಸ್ ವಿಶ್ಲೇಷಿಸಿದ್ದಾರೆ.

ಯುದ್ಧ ನಿಲ್ಲಿಸುವುದು, ಜೀವನ ವೆಚ್ಚ ಮತ್ತು ಹಣದುಬ್ಬರ ನಿಯಂತ್ರಣ ಮತದಾರರ ಪ್ರಮುಖ ಬೇಡಿಕೆಗಳಾಗಿದ್ದವು. ತೈಲ ಬೆಲೆ ಏರಿಕೆಯೂ ಚುನಾವಣೆಯ ಮೇಲೆ ಪರಿಣಾಮ ಬೀರಿದೆ. ‘ಅಮೆರಿಕ ಮೊದಲು’ ನೀತಿ ಹಾಗೂ ಇಸ್ರೇಲ್ ಜೊತೆಗಿನ ಸಂಬಂಧ ಬದಲಾವಣೆಯನ್ನೂ ಮತದಾರರು ನಿರೀಕ್ಷಿಸಿದ್ದರು ಎಂದಿದ್ದಾರೆ.

ವಲಸೆ ನೀತಿಯನ್ನು ಸೋಲಿಗೆ ಕಾರಣವೆಂದು ಬಿಂಬಿಸುವುದನ್ನು ವಿರೋಧಿಸಿರುವ ವ್ಯಾನ್ಸ್, ಅಕ್ರಮ ವಲಸಿಗರಿಗೆ ಕ್ಷಮಾದಾನ ಪರಿಹಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನ್ ಯುದ್ಧದ ರಾಜಕೀಯ ಪರಿಣಾಮವನ್ನು ಬೆಂಬಲಿಗರು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *