ಪಾಕ್ ಬಾಹ್ಯಾಕಾಶ ಸಾಮರ್ಥ್ಯ ವೃದ್ಧಿ: ಭಾರತದ ಭದ್ರತೆಗೆ ಸವಾಲು! ನಾವೂ ಸೇನಾ ಉಪಗ್ರಹ ವ್ಯವಸ್ಥೆ ಬಲಪಡಿಸುವುದು ಅಗತ್ಯ ಎಂದ ಸಿಡಿಎಸ್

0
Chief-of-Defence-Staff-CDS-General-NS-Raja-Subramani

ನವದೆಹಲಿ: ಚೀನಾ ನೆರವಿನಿಂದ ಪಾಕಿಸ್ತಾನದ ಬಾಹ್ಯಾಕಾಶ ಸಾಮರ್ಥ್ಯ ಹೆಚ್ಚುತ್ತಿದ್ದು, ಟರ್ಕಿ ಕೂಡ ಸಹಕರಿಸುವ ಸಾಧ್ಯತೆಯಿದೆ. ಇದು ಭಾರತದ ರಕ್ಷಣಾ ಭದ್ರತೆಗೆ ಹೊಸ ಸವಾಲಾಗಬಹುದು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಎಚ್ಚರಿಸಿದ್ದಾರೆ.

ವಿವೇಕಾನಂದ ಇಂಟರ್‌ನ್ಯಾಷನಲ್ ಫೌಂಡೇಷನ್‌ನಲ್ಲಿ ಮಾತನಾಡಿದ ಅವರು, ಚೀನಾ, ಪಾಕಿಸ್ತಾನ ಮತ್ತು ಟರ್ಕಿ ನಡುವಿನ ಸೇನಾ ಸಹಕಾರ ಭಾರತದ ಭದ್ರತಾ ಲೆಕ್ಕಾಚಾರದಲ್ಲಿ ಪ್ರಮುಖವಾಗಿದೆ ಎಂದರು. ಚೀನಾದ ಸುಧಾರಿತ ಗುಪ್ತಚರ, ಕಣ್ಗಾವಲು, ನ್ಯಾವಿಗೇಷನ್ ಮತ್ತು ಉಪಗ್ರಹ ತಂತ್ರಜ್ಞಾನಗಳು ಪಾಕಿಸ್ತಾನಕ್ಕೆ ಲಭ್ಯವಾದರೆ ಅದರ ಯುದ್ಧ ಸಾಮರ್ಥ್ಯ ಹೆಚ್ಚಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಭಾರತದ ಬಾಹ್ಯಾಕಾಶ ಆಧಾರಿತ ಕಣ್ಗಾವಲು ವ್ಯವಸ್ಥೆ ಬಲಪಡಿಸಲು ಅವರು ಒತ್ತಾಯಿಸಿದರು. ಸ್ಪೇಸ್ ಬೇಸ್ಡ್ ಸರ್ವೇಲೆನ್ಸ್ (SBS) ಹಂತ-3 ಯೋಜನೆಯಡಿ ಮುಂದಿನ ಮೂರು ವರ್ಷಗಳಲ್ಲಿ 52 ಸೇನಾ ಉಪಗ್ರಹಗಳನ್ನು ಉಡಾವಣೆ ಮಾಡಲು ಭಾರತ ಯೋಜಿಸಿದೆ.

₹26,968 ಕೋಟಿ ವೆಚ್ಚದ ಈ ಯೋಜನೆಗೆ 2024ರ ಅಕ್ಟೋಬರ್‌ನಲ್ಲಿ ಅನುಮೋದನೆ ದೊರೆತಿದೆ. ಇಸ್ರೋ 21 ಉಪಗ್ರಹಗಳನ್ನು ನಿರ್ಮಿಸಲಿದ್ದು, ಉಳಿದ 31 ಉಪಗ್ರಹಗಳನ್ನು ಖಾಸಗಿ ಕಂಪನಿಗಳು ನಿರ್ಮಿಸಲಿವೆ. ಆಧುನಿಕ ಯುದ್ಧದಲ್ಲಿ ಬಾಹ್ಯಾಕಾಶ ಪ್ರಾಬಲ್ಯವೂ ನಿರ್ಣಾಯಕ ಎಂದು ಸಿಡಿಎಸ್ ಹೇಳಿದರು.

Leave a Reply

Your email address will not be published. Required fields are marked *