ಇರಾಕ್‌ಗೆ ಟ್ರಂಪ್ ಬೆಂಬಲ: ಭ್ರಷ್ಟಾಚಾರ, ತೈಲ ಕಳ್ಳಸಾಗಣೆ ವಿರುದ್ಧ ಕ್ರಮಕ್ಕೆ ಮೆಚ್ಚುಗೆ!

0
Natural-gas-Oil-Petrolium-1

ವಾಷಿಂಗ್ಟನ್: ಇರಾಕ್‌ನಲ್ಲಿ ತೈಲ ಕಳ್ಳಸಾಗಣೆ ತಡೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಗೆ ಪ್ರಧಾನಿ ಅಲಿ ಅಲ್-ಜೈದಿ ಕೈಗೊಂಡ ಕ್ರಮಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲ ಸೂಚಿಸಿದ್ದಾರೆ. ದೇಶದ ಎಲ್ಲ ಶಸ್ತ್ರಾಸ್ತ್ರಗಳು ಸರ್ಕಾರದ ನಿಯಂತ್ರಣದಲ್ಲಿರಬೇಕು ಎಂಬ ನಿರ್ಧಾರವನ್ನೂ ಶ್ಲಾಘಿಸಿದ್ದಾರೆ.

‘ಟ್ರೂತ್ ಸೋಶಿಯಲ್’ನಲ್ಲಿ ಸಂದೇಶ ಹಂಚಿಕೊಂಡಿರುವ ಟ್ರಂಪ್, ಏಕೀಕೃತ ಮತ್ತು ಬಲಿಷ್ಠ ಇರಾಕ್ ನಿರ್ಮಾಣಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕುರ್ದಿಸ್ತಾನ್ ಪ್ರದೇಶದ ಗಡಿ ಪ್ರವೇಶ ಕೇಂದ್ರಗಳನ್ನು ಫೆಡರಲ್ ಸರ್ಕಾರದ ನಿಯಂತ್ರಣಕ್ಕೆ ತರುವುದು, ತೈಲ ರಫ್ತಿಗೆ ಕೇಂದ್ರದ ಅನುಮೋದನೆ ಕಡ್ಡಾಯಗೊಳಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಇರಾಕ್ ಸರ್ಕಾರ ಕೈಗೊಂಡಿದೆ. ಕಳ್ಳಸಾಗಣೆ ಶಂಕೆ ಹಿನ್ನೆಲೆಯಲ್ಲಿ ಉತ್ತರ ತೈಲ ಕಂಪನಿಯಲ್ಲೂ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *