ಅಂಚೆ ಕಚೇರಿ ಮೂಲಸೌಕರ್ಯ ಆಧುನೀಕರಣಕ್ಕೆ ₹1,491 ಕೋಟಿ ಯೋಜನೆಗೆ ಸಂಪುಟ ಅನುಮೋದನೆ

0
India-Post-post-office-1

ನವದೆಹಲಿ: ಅಂಚೆ ಇಲಾಖೆಯ ‘ಎಸ್ಟೇಟ್ ನಿರ್ವಹಣಾ ಯೋಜನೆ’ಯನ್ನು 2026-27ರಿಂದ 2030-31ರವರೆಗಿನ ಐದು ವರ್ಷಗಳ ಅವಧಿಗೆ ಮುಂದುವರಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಯೋಜನೆಗೆ ಒಟ್ಟು ₹1,491 ಕೋಟಿ ವೆಚ್ಚವಾಗಲಿದೆ. ಅಂಚೆ ಕಚೇರಿ ಕಟ್ಟಡಗಳು ಮತ್ತು ವಸತಿ ಸಂಕೀರ್ಣಗಳ ನಿರ್ಮಾಣ, ಪುನರ್ನಿರ್ಮಾಣ, ನವೀಕರಣ, ಏಕರೂಪದ ಬ್ರಾಂಡಿಂಗ್ ಹಾಗೂ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮೂಲಕ ಅಂಚೆ ಮೂಲಸೌಕರ್ಯ ಆಧುನೀಕರಿಸುವುದು ಯೋಜನೆಯ ಉದ್ದೇಶವಾಗಿದೆ.

ಯೋಜನೆಯಡಿ 190 ಹೊಸ ಅಂಚೆ ಕಟ್ಟಡಗಳ ನಿರ್ಮಾಣಕ್ಕೆ ₹280 ಕೋಟಿ, ಶಿಥಿಲಗೊಂಡ 50 ಕಟ್ಟಡಗಳ ಪುನರ್ನಿರ್ಮಾಣಕ್ಕೆ ₹108 ಕೋಟಿ ಮೀಸಲಿಡಲಾಗಿದೆ. ಉಪ ಅಂಚೆ ಕಚೇರಿಗಳ ನವೀಕರಣ ಮತ್ತು ಬ್ರಾಂಡಿಂಗ್‌ಗೆ ₹318 ಕೋಟಿ ಹಾಗೂ ಬಾಡಿಗೆ ಕಟ್ಟಡಗಳಲ್ಲಿರುವ 2,500 ಅಂಚೆ ಕಚೇರಿಗಳ ಉನ್ನತೀಕರಣಕ್ಕೆ ₹37.5 ಕೋಟಿ ಒದಗಿಸಲಾಗಿದೆ.

ಪಾರಂಪರಿಕ ಅಂಚೆ ಕಟ್ಟಡಗಳ ಸಂರಕ್ಷಣೆಗೆ ₹180 ಕೋಟಿ ಮತ್ತು 150 ವಸತಿ ಸಂಕೀರ್ಣಗಳ ನವೀಕರಣಕ್ಕೆ ₹357.5 ಕೋಟಿ ಮೀಸಲಿಡಲಾಗಿದೆ. ಸುಸ್ಥಿರ ಹಾಗೂ ಎಲ್ಲರಿಗೂ ಸುಲಭವಾಗಿ ಪ್ರವೇಶಿಸಬಹುದಾದ ಮೂಲಸೌಕರ್ಯ ಅಭಿವೃದ್ಧಿಗೆ ₹100 ಕೋಟಿ ಮತ್ತು ಬೆಂಗಳೂರಿನಲ್ಲಿ ‘ಅಂಚೆ ತಂತ್ರಜ್ಞಾನದಲ್ಲಿ ಶ್ರೇಷ್ಠತಾ ಕೇಂದ್ರ’ ಸ್ಥಾಪನೆಗೆ ₹100 ಕೋಟಿ ಹಂಚಿಕೆ ಮಾಡಲಾಗಿದೆ.

Leave a Reply

Your email address will not be published. Required fields are marked *

You may have missed