ಸೌದಿ ಅಬ್ಹಾ ವಿಮಾನ ನಿಲ್ದಾಣ, ವಾಯುನೆಲೆ ಮೇಲೆ ದಾಳಿ: ಹೌತಿಗಳ ಹೇಳಿಕೆ

0
Yemen-Houthi-soudi-Clash-War

ರಿಯಾದ್: ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡು ಹಾರಿಸಲಾಗಿದ್ದ ಮೂರು ಡ್ರೋನ್‌ಗಳನ್ನು ಸೌದಿ ನೇತೃತ್ವದ ಮೈತ್ರಿಕೂಟ ಹೊಡೆದುರುಳಿಸಿದೆ. ಮೆಕ್ಕಾ ಪ್ರದೇಶದ ಮೇಲೆ ಹಾರುತ್ತಿದ್ದ ಒಂದು ಡ್ರೋನ್ ಕೂಡ ನಾಶವಾಗಿದೆ.

ಇದೇ ವೇಳೆ, ಅಸೀರ್ ಪ್ರದೇಶದ ಅಬ್ಹಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಕಿಂಗ್ ಖಾಲಿದ್ ವಾಯುನೆಲೆ ಮೇಲೆ ದಾಳಿ ನಡೆಸಿರುವುದಾಗಿ ಹೌತಿ ಬಂಡುಕೋರರು ಹೇಳಿಕೊಂಡಿದ್ದಾರೆ. ಡ್ರೋನ್ ಮೂಲಕ ವಿಮಾನ ನಿಲ್ದಾಣಕ್ಕೆ ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ಖಮೀಸ್ ಮುಶೈತ್‌ನ ವಾಯುನೆಲೆಗೆ ದಾಳಿ ನಡೆಸಲಾಗಿದೆ ಎಂದು ವಕ್ತಾರ ಯಾಹ್ಯಾ ಸರಿಯಾ ತಿಳಿಸಿದ್ದಾರೆ. ಇದರಿಂದ ವಿಮಾನ ಸಂಚಾರಕ್ಕೆ ಅಡಚಣೆಯಾಗಿದೆ ಎಂದಿದ್ದಾರೆ.

ಯೆಮನ್‌ನ ಲಹ್ಜ್ ಮತ್ತು ಅಲ್-ಜೌಫ್ ಪ್ರದೇಶಗಳಲ್ಲೂ ಸರ್ಕಾರಿ ಪಡೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೌತಿಗಳು ಪ್ರತಿಪಾದಿಸಿದ್ದಾರೆ. ದಾಳಿಗಳಲ್ಲಿ ಸಾವು-ನೋವು ಹಾಗೂ ಸೇನಾ ವಾಹನಗಳಿಗೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *