ರಶ್ಮಿಕಾ ‘ಮೈಸ’ ಟೀಸರ್ ರಿಲೀಸ್; ಕುತೂಹಲ ಮೂಡಿಸಿದ ಥ್ರಿಲ್ಲಿಂಗ್ ದೃಶ್ಯಗಳು

0
Rashmika-Mandanna-in-Mysaa-movie

ಹೈದರಾಬಾದ್: ಬಹುನಿರೀಕ್ಷಿತ ನಟಿ ರಶ್ಮಿಕಾ ಮಂದಣ್ಣ ಅಭಿನಯದ ‘ಮೈಸ’ (Mysaa) ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾದ ವಿಭಿನ್ನ ಕಥಾಹಂದರ ಹಾಗೂ ರಶ್ಮಿಕಾ ಅವರ ಪಾತ್ರ ಕುತೂಹಲ ಮೂಡಿಸಿದೆ.

ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿರುವ ಚಿತ್ರದ ಟೀಸರ್, ಶೀರ್ಷಿಕೆ ಪಾತ್ರ ‘ಮೈಸ’ ಆಗಿ ಕಾಣಿಸಿಕೊಂಡಿರುವ ರಶ್ಮಿಕಾ ಅವರ ಧ್ವನಿಯೊಂದಿಗೆ ಆರಂಭವಾಗುತ್ತದೆ.

ಚಿತ್ರದಲ್ಲಿ ರಶ್ಮಿಕಾ ಅವರು ಗೊಂಡ್ ಬುಡಕಟ್ಟಿನ ಮಹಿಳೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನಲ್ಲಿ ಅವರ ಪಾತ್ರದ ನೋವು, ಹೋರಾಟ ಮತ್ತು ಆಂತರಿಕ ಸಂಘರ್ಷದ ಸುಳಿವು ಸಿಗುತ್ತದೆ.

ಟೀಸರ್‌ನಲ್ಲಿನ ಅತ್ಯಂತ ಗಮನ ಸೆಳೆಯುವ ದೃಶ್ಯವೆಂದರೆ ರಶ್ಮಿಕಾ ನೀರಿನ ತಳದಲ್ಲಿ ಕುಡುಗೋಲು ಹಿಡಿದು ಕುಳಿತಿರುವ ದೃಶ್ಯ. ಈ ದೃಶ್ಯ ಪ್ರೇಕ್ಷಕರಲ್ಲಿ ಸಿನಿಮಾದ ಕಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅನ್‌ಫಾರ್ಮುಲಾ ಫಿಲ್ಮ್ಸ್ ನಿರ್ಮಿಸುತ್ತಿರುವ ‘ಮೈಸ’ ಚಿತ್ರವನ್ನು ರವೀಂದ್ರ ಪುಲ್ಲೆ ನಿರ್ದೇಶಿಸಿದ್ದಾರೆ. ಆಕ್ಷನ್–ಡ್ರಾಮಾ ಕಥಾಹಂದರ ಹೊಂದಿರುವ ಈ ಸಿನಿಮಾ ರಶ್ಮಿಕಾ ಅವರ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆಯುತ್ತಿದೆ.

ಚಿತ್ರವು 2026ರ ನವೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮತ್ತೊಮ್ಮೆ ಖಚಿತಪಡಿಸಿದೆ. ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ‘ಮೈಸ’ ಚಿತ್ರದ ಟೀಸರ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *