ವಿರಾಟ್ ಕರ್ಣ ಹೊಸ ಚಿತ್ರಕ್ಕೆ ‘ರುಸ್ತುಂ’ ಶೀರ್ಷಿಕೆ!

0
Rustum-Movie

ಹೈದರಾಬಾದ್: ನಟ ವಿರಾಟ್ ಕರ್ಣ ಅಭಿನಯದ ಹೊಸ ಸಿನಿಮಾಗೆ ‘ರುಸ್ತುಂ’ ಎಂದು ಶೀರ್ಷಿಕೆ ಘೋಷಿಸಲಾಗಿದೆ. ನಟನ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ಕನಿಷ್ಕ ಗಂಧಂ ಚಿತ್ರದ ಟೈಟಲ್ ಗ್ಲಿಂಪ್ಸ್ ಬಿಡುಗಡೆ ಮಾಡಿದ್ದಾರೆ.

ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ನಿರ್ಮಿಸುತ್ತಿರುವ ಚಿತ್ರಕ್ಕೆ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಬಂಡವಾಳ ಹೂಡಿದ್ದಾರೆ. ಆ್ಯಕ್ಷನ್, ಡ್ರಾಮಾ ಮತ್ತು ಆಂತರಿಕ ಸಂಘರ್ಷದ ಕಥಾಹಂದರ ಚಿತ್ರದಲ್ಲಿದೆ.

ಸ್ಟೈಲಿಶ್ ಅನಿಮೇಷನ್ ಹಾಗೂ ಹಿನ್ನೆಲೆ ಸಂಗೀತದ ಮೂಲಕ ಚಿತ್ರದ ಲೋಕ ಪರಿಚಯಿಸಲಾಗಿದೆ. ಗ್ಲಿಂಪ್ಸ್ ಕೊನೆಯಲ್ಲಿ ವಿರಾಟ್ ಕರ್ಣ ಹಿಂಬದಿಯಿಂದ ಕಾಣಿಸಿಕೊಂಡಿದ್ದು, ಅವರ ಗಂಭೀರ ಲುಕ್ ಕುತೂಹಲ ಮೂಡಿಸಿದೆ.

ತನ್ನದೇ ಅಪರಾಧಪ್ರಜ್ಞೆಯ ವಿರುದ್ಧ ಹೋರಾಡುವ ವ್ಯಕ್ತಿಯ ಕಥೆ ಚಿತ್ರದ ಪ್ರಮುಖ ಆಕರ್ಷಣೆಯಾಗಿರಲಿದೆ ಎಂದು ಚಿತ್ರತಂಡ ತಿಳಿಸಿದೆ.

Leave a Reply

Your email address will not be published. Required fields are marked *