ರಿಯಾದ್ ವಿಮಾನ ನಿಲ್ದಾಣದ ದಾಳಿ: ಗಾಯಗೊಂಡಿದ್ದ ಭಾರತೀಯ ಸಾವು

0
Soudi-airport-Houthi-attack-1

ರಿಯಾದ್: ಸೌದಿ ಅರೇಬಿಯಾದ ರಿಯಾದ್‌ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಅಕ್ಟೋಬರ್ 10ರಂದು ನಡೆದ ದಾಳಿಯಲ್ಲಿ ಗಾಯಗೊಂಡಿದ್ದ ಭಾರತೀಯ ಪ್ರಜೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿದ ಮಾಹಿತಿ ಪ್ರಕಾರ, ದಾಳಿಯಲ್ಲಿ ಗಾಯಗೊಂಡಿದ್ದ 11 ಭಾರತೀಯರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ದಾಳಿಯಲ್ಲಿ ಈ ಹಿಂದೆ 12 ಮಂದಿ ಮೃತಪಟ್ಟಿದ್ದು, 309 ಮಂದಿ ಗಾಯಗೊಂಡಿದ್ದರು ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದರು.

ಮೃತರಲ್ಲಿ ನಾಲ್ವರು ಸೌದಿ ಪ್ರಜೆಗಳು ಹಾಗೂ ಎಂಟು ಮಂದಿ ವಿದೇಶಿ ನಿವಾಸಿಗಳು ಸೇರಿದ್ದರು. ವಿದೇಶಿ ನಿವಾಸಿಗಳಲ್ಲಿ ಬಾಂಗ್ಲಾದೇಶದ ಇಬ್ಬರು ಹಾಗೂ ಅಮೆರಿಕ, ಈಜಿಪ್ಟ್, ಜೋರ್ಡಾನ್, ಸಿರಿಯಾ, ಪ್ಯಾಲೆಸ್ತೀನ್ ಮತ್ತು ಸುಡಾನ್‌ನ ತಲಾ ಒಬ್ಬರು ಸೇರಿದ್ದಾರೆ ಎಂದು ವರದಿಯಾಗಿತ್ತು.

ಯೆಮನ್‌ನ ಹೌತಿ ಬಂಡುಕೋರರು ಮತ್ತು ಸೌದಿ ಅರೇಬಿಯಾ ಪರಸ್ಪರ ಪ್ರಮುಖ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ ಎಂದು ವರದಿಗಳು ತಿಳಿಸಿವೆ. ಇದೇ ವೇಳೆ, ಯೆಮನ್‌ನಲ್ಲಿ 1,900ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿ, 1,150ಕ್ಕೂ ಅಧಿಕ ಹೌತಿ ಹೋರಾಟಗಾರರನ್ನು ಹತ್ಯೆ ಮಾಡಿರುವುದಾಗಿ ಯೆಮನ್ ಸೇನೆ ಹೇಳಿಕೊಂಡಿದೆ.

Leave a Reply

Your email address will not be published. Required fields are marked *