ಮೊದಲ ದಿನದಗಳಿಕೆ; ‘ಅನಿಮಲ್’ ಹಿಂದಿಕ್ಕಿದ ‘ರಾಮಾಯಣ’; ‘ಆದಿಪುರುಷ್’ ದಾಖಲೆ ಮುರಿಯಲು ವಿಫಲ

0
Mahakavya-Shri-Ramayana-Katha-movie

ಮುಂಬೈ: ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಮೊದಲ ದಿನದ ಗಳಿಕೆಯಲ್ಲಿ ಶಾರುಖ್ ಖಾನ್ ಅಭಿನಯದ ‘ಪಠಾಣ್’ ಮತ್ತು ರಣಬೀರ್ ಕಪೂರ್ ಅವರ ‘ಅನಿಮಲ್’ ಚಿತ್ರಗಳ ದಾಖಲೆಗಳನ್ನು ಹಿಂದಿಕ್ಕಿದೆ. ಆದರೆ ಪ್ರಭಾಸ್ ಅಭಿನಯದ ‘ಆದಿಪುರುಷ್’ ಚಿತ್ರದ ಮೊದಲ ದಿನದ ಗಳಿಕೆಯ ದಾಖಲೆಯನ್ನು ಮುರಿಯಲು ವಿಫಲವಾಗಿದೆ.

ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಕಂಡ ‘ರಾಮಾಯಣ’ ಭಾರತದಲ್ಲಿ ಮೊದಲ ದಿನ ₹64.85 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ಗ್ರಾಸ್ ಗಳಿಕೆ ₹77 ಕೋಟಿಗೂ ಅಧಿಕವಾಗಿದೆ ಎಂದು ವರದಿಯಾಗಿದೆ.

ಶಾರುಖ್ ಖಾನ್ ಅಭಿನಯದ ‘ಪಠಾಣ್’ ಮೊದಲ ದಿನ ₹57 ಕೋಟಿ ಗಳಿಸಿದ್ದರೆ, ‘ಅನಿಮಲ್’ ₹63 ಕೋಟಿ ಗಳಿಸಿತ್ತು. ಈ ಎರಡೂ ಚಿತ್ರಗಳ ಗಳಿಕೆಯನ್ನು ‘ರಾಮಾಯಣ’ ಹಿಂದಿಕ್ಕಿದೆ. ಆದರೆ ಪ್ರಭಾಸ್ ಅಭಿನಯದ ‘ಆದಿಪುರುಷ್’ ಮೊದಲ ದಿನ ಗಳಿಸಿದ್ದ ₹86.75 ಕೋಟಿ ದಾಖಲೆಯನ್ನು ತಲುಪಲು ಸಾಧ್ಯವಾಗಿಲ್ಲ.

ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರಕ್ಕೆ ಬಿಡುಗಡೆಗೂ ಮುನ್ನವೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿಶ್ವಾದ್ಯಂತ ₹200 ಕೋಟಿ ಮೌಲ್ಯದ ಮುಂಗಡ ಟಿಕೆಟ್ ಬುಕ್ಕಿಂಗ್ ದಾಖಲಾಗಿದ್ದು, ಭಾರತದಲ್ಲೇ ₹120 ಕೋಟಿಗೂ ಅಧಿಕ ಮುಂಗಡ ಬುಕ್ಕಿಂಗ್ ನಡೆದಿತ್ತು.

ಹಿಂದಿ ಆವೃತ್ತಿ ಉತ್ತಮ ಪ್ರದರ್ಶನ ನೀಡಿದ್ದು, ಕನ್ನಡ ಆವೃತ್ತಿಯಿಂದ ₹7.25 ಕೋಟಿ ಗಳಿಕೆ ದಾಖಲಾಗಿದೆ. ವಿದೇಶಿ ಮಾರುಕಟ್ಟೆಗಳ ಮೊದಲ ದಿನದ ಗಳಿಕೆ ಸೇರಿದ ಬಳಿಕ ಚಿತ್ರದ ಒಟ್ಟು ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

 

Leave a Reply

Your email address will not be published. Required fields are marked *

You may have missed