‘ಡೆತ್ ರೈಲ್ವೇ’: 1944ರ ಎರಡನೇ ಮಹಾಯುದ್ಧ ಮತ್ತು ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕಥೆ

0
Death-Railway-movie

ಚೆನ್ನೈ: ನಟ ಸಸಿಕುಮಾರ್ ಅವರು ನಿರ್ದೇಶಕ ಧರಣಿ ರಸೇಂದ್ರನ್ ಅವರ ಐತಿಹಾಸಿಕ ಯುದ್ಧಾಧಾರಿತ ಸಿನಿಮಾ ‘ಡೆತ್ ರೈಲ್ವೇ’ಯಲ್ಲಿ ಭಾರತೀಯ ರಾಷ್ಟ್ರೀಯ ಸೇನೆಯ (ಐಎನ್‌ಎ) ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಧರಣಿ ರಸೇಂದ್ರನ್ ಅವರ ಜನ್ಮದಿನದ ಅಂಗವಾಗಿ ಚಿತ್ರದ ಗ್ಲಿಂಪ್ಸ್ ವಿಡಿಯೋ ಬಿಡುಗಡೆ ಮಾಡಲಾಗಿದೆ. 1944ರ ಎರಡನೇ ಮಹಾಯುದ್ಧ ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯ ಕಥೆಯನ್ನು ಚಿತ್ರ ಹೊಂದಿದೆ. ಬರ್ಮಾದಿಂದ ಭಾರತದತ್ತ ಮುನ್ನಡೆಯುತ್ತಿದ್ದ ಜಪಾನ್ ಸೇನೆಯ ಯುದ್ಧದ ಸನ್ನಿವೇಶಗಳೂ ಚಿತ್ರದಲ್ಲಿರಲಿವೆ.

ಐತಿಹಾಸಿಕ ಘಟನೆಗಳ ಜೊತೆಗೆ ಪ್ರೇಮಕಥೆಯ ಎಳೆಯೂ ಸಿನಿಮಾದಲ್ಲಿದೆ. ಸಸಿಕುಮಾರ್ ನಾಯಕನಾಗಿ ನಟಿಸುತ್ತಿದ್ದು, ಸಮುದ್ರಕನಿ, ಸೇಯೋನ್, ಕಿಶೋರ್, ಭವಾನಿ ಶ್ರೀ ಮತ್ತು ಶಿವದಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಶೋಕ್ ಸೆಲ್ವನ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ.

ಜೆ.ಕೆ. ಫಿಲ್ಮ್ ಇಂಟರ್‌ನ್ಯಾಷನಲ್ ಬ್ಯಾನರ್‌ನಲ್ಲಿ ಜೆ. ಕಮಲಕಣ್ಣನ್ ನಿರ್ಮಿಸುತ್ತಿರುವ ಚಿತ್ರಕ್ಕೆ ಧರಣಿ ರಸೇಂದ್ರನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

 

Leave a Reply

Your email address will not be published. Required fields are marked *

You may have missed