‘ಪ್ರೇಮದ ಊರಲಿ’ ; ಒಂದು ತಿಂಗಳಲ್ಲಿ ಕೋಟಿ ಕ್ಲಬ್ಗೆ ಎಂಟ್ರಿ

ಬೆಂಗಳೂರು: ‘ಪ್ರೇಮದ ಊರಲಿ’ ಸಿನಿಮಾ ಬಿಡುಗಡೆಯಾದ 31 ದಿನಗಳಲ್ಲಿ ವಿಶ್ವಾದ್ಯಂತ ₹121 ಕೋಟಿ ಗಳಿಸುವ ಮೂಲಕ 100 ಕೋಟಿ ಕ್ಲಬ್ಗೆ ಸೇರ್ಪಡೆಯಾಗಿದೆ. ಆರಂಭದಲ್ಲಿ ನಿಧಾನಗತಿಯ ಗಳಿಕೆ ಕಂಡಿದ್ದ ಚಿತ್ರ, ಪ್ರೇಕ್ಷಕರ ಬೆಂಬಲದಿಂದ ಬಾಕ್ಸ್ ಆಫೀಸ್ನಲ್ಲಿ ಗಮನಾರ್ಹ ಚೇತರಿಕೆ ಕಂಡಿದೆ.
ವರದಿಗಳ ಪ್ರಕಾರ, ಚಿತ್ರ ಭಾರತದಲ್ಲಿ ₹101.22 ಕೋಟಿ ನೆಟ್ ಹಾಗೂ ₹118.33 ಕೋಟಿ ಗ್ರಾಸ್ ಗಳಿಸಿದೆ. 31ನೇ ದಿನವಾದ ಭಾನುವಾರ 851 ಪ್ರದರ್ಶನಗಳಿಂದ ₹3.75 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ ಗಳಿಕೆಯಲ್ಲಿ ಶೇ.25ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ.

ಮೊದಲ ದಿನ ಕೇವಲ ₹13 ಲಕ್ಷ ಗಳಿಕೆಯೊಂದಿಗೆ ಆರಂಭವಾದ ಸಿನಿಮಾ, ಮೊದಲ ವಾರದಲ್ಲಿ ₹5.32 ಕೋಟಿ ಸಂಗ್ರಹಿಸಿತ್ತು. 11ರಿಂದ 20ನೇ ದಿನದ ಅವಧಿಯಲ್ಲಿ ಗಳಿಕೆಯಲ್ಲಿ ಏರಿಕೆ ಕಂಡುಬಂದಿದ್ದು, ನಾಲ್ಕನೇ ವಾರದಲ್ಲಿ ಸುಮಾರು ₹27 ಕೋಟಿ ಗಳಿಸಿದೆ ಎಂದು ವರದಿಯಾಗಿದೆ.
ವಾರಾಂತ್ಯಗಳು ಮತ್ತು ರಜೆಗಳ ಲಾಭ ಪಡೆದ ಚಿತ್ರಕ್ಕೆ ಪ್ರೇಕ್ಷಕರ ಬೆಂಬಲ ನಿರಂತರವಾಗಿ ದೊರೆತಿದೆ. ಬಿಡುಗಡೆಯಾದ ಒಂದು ತಿಂಗಳೊಳಗೆ 100 ಕೋಟಿ ಕ್ಲಬ್ ಪ್ರವೇಶಿಸಿರುವುದು ಚಿತ್ರದ ಬಾಕ್ಸ್ ಆಫೀಸ್ ಪಯಣದ ಪ್ರಮುಖ ಮೈಲಿಗಲ್ಲಾಗಿದೆ.
