ಹಾರ್ಮುಜ್ ಜಲಸಂಧಿ ನಿರ್ಬಂಧ: ಭಾರತ ಸೇರಿ ನಾಲ್ಕು ದೇಶಗಳಿಗೆ ಇರಾನ್ ವಿನಾಯಿತಿ

0
Strait-of-Hormuz-1

ಟೆಹರಾನ್: ಹಾರ್ಮುಜ್ ಜಲಸಂಧಿಯ ಸಂಚಾರ ನಿರ್ಬಂಧದಿಂದ ಭಾರತ ಸೇರಿದಂತೆ ನಾಲ್ಕು ದೇಶಗಳ ವಾಣಿಜ್ಯ ಹಡಗುಗಳಿಗೆ ಇರಾನ್ ವಿನಾಯಿತಿ ನೀಡಿದೆ. ಭಾರತ, ಚೀನಾ, ಇರಾಕ್ ಮತ್ತು ಕತಾರ್ ಹಡಗುಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಇರಾನ್ ಸಂಸದೀಯ ಸಮಿತಿ ಉಪಾಧ್ಯಕ್ಷ ಅಮೀರ್ ಹಯಾತ್ ಮೊಗದಮ್ ತಿಳಿಸಿದ್ದಾರೆ.

ಭಾರತಕ್ಕೆ ಅಗತ್ಯ ಔಷಧ ಮತ್ತು ವೈದ್ಯಕೀಯ ಸಾಮಗ್ರಿಗಳ ಪೂರೈಕೆ ಸುಗಮಗೊಳಿಸುವುದು ಈ ನಿರ್ಧಾರದ ಉದ್ದೇಶವಾಗಿದೆ. ಚೀನಾದ ರಾಜತಾಂತ್ರಿಕ ಬೆಂಬಲ ಹಾಗೂ ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧ ಬಲಪಡಿಸುವ ಉದ್ದೇಶವೂ ಇದೆ ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಚೀನಾದ ಹಡಗುಗಳು ಸಂಚಾರ ಶುಲ್ಕ ಪಾವತಿಸಬೇಕು. ಕತಾರ್‌ನ ಹಡಗುಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಹಡಗಿನ ಗುರುತು, ಸರಕು ಮತ್ತು ಗಮ್ಯಸ್ಥಾನದ ವಿವರ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಜಲಸಂಧಿಯ ಸಂಚಾರವನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆ ನಿಯಂತ್ರಿಸುತ್ತಿದೆ.

Leave a Reply

Your email address will not be published. Required fields are marked *