ನಾರಾಯಣ ಗುರುಗಳ ತತ್ವದಡಿ ಸಾಮಾಜಿಕ ನ್ಯಾಯಕ್ಕೆ ಒಗ್ಗಟ್ಟಾಗಲಿ: ಬಿ.ಕೆ. ಹರಿಪ್ರಸಾದ್!

0
Hariprasad-Billava-meet-Bengaluru

ಬೆಂಗಳೂರು: ಜಾತೀಯತೆ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳಡಿ ಮಹಾಒಕ್ಕೂಟ ಮುನ್ನಡೆಯಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆಶಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ‘ಶ್ರೀ ನಾರಾಯಣಗುರು ಮಹಾಒಕ್ಕೂಟ–ಕರ್ನಾಟಕ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ, ಸಂಘಟನೆ ಮತ್ತು ಸಮಾನತೆಯ ಮೂಲಕ ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ನಾರಾಯಣ ಗುರುಗಳು ದಾರಿ ತೋರಿದ್ದಾರೆ ಎಂದರು.

ಈಡಿಗ, ಬಿಲ್ಲವ, ದೀವರು, ನಾಮಧಾರಿ, ನಾಡರ್, ತಿಯ್ಯ ಸೇರಿದಂತೆ 20 ಉಪಜಾತಿಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಶ್ಲಾಘನೀಯ. ಸಂಘಟನೆ ಕೇವಲ ಸಂಖ್ಯಾಬಲಕ್ಕೆ ಸೀಮಿತವಾಗದೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಬಲೀಕರಣಕ್ಕೆ ಶ್ರಮಿಸಬೇಕು. ಇತರ ಶೋಷಿತ ಸಮುದಾಯಗಳನ್ನೂ ಒಳಗೊಂಡು ಸಾಮಾಜಿಕ ನ್ಯಾಯ ಬಲಪಡಿಸಬೇಕು ಎಂದು ಹೇಳಿದರು.

ಕೇರಳದ ವರ್ಕಳ ಶಿವಗಿರಿ ಮಠದ ಶ್ರೀ ಋತಂಬರಾನಂದ ಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು. ಹಲವು ಮಠಾಧೀಶರು ಹಾಗೂ ಧಾರ್ಮಿಕ ಮುಖಂಡರು ಸಾನ್ನಿಧ್ಯ ವಹಿಸಿದ್ದರು.

Leave a Reply

Your email address will not be published. Required fields are marked *