ಚಂಡಮಾರುತದ ಅಬ್ಬರ; ವಿದ್ಯುತ್ ವ್ಯತ್ಯಯದಿಂದ ಕಗ್ಗತ್ತಲಲ್ಲಿ ಅಮೆರಿಕದ ಪೂರ್ವ ಕರಾವಳಿ

0
US-Rain

ವಾಷಿಂಗ್ಟನ್: ಅಮೆರಿಕದ ಪೂರ್ವ ಕರಾವಳಿಯಲ್ಲಿ ಥ್ಯಾಂಕ್ಸ್‌ಗಿವಿಂಗ್ ದಿನ ಅಪ್ಪಳಿಸಿದ ಪ್ರಬಲ ಚಂಡಮಾರುತದಿಂದ ಭಾರಿ ಹಾನಿಯಾಗಿದೆ. ಎರಡು ದಿನ ಕಳೆದರೂ ಜನಜೀವನ ಸಹಜ ಸ್ಥಿತಿಗೆ ಮರಳಿಲ್ಲ. ಶನಿವಾರ ಬೆಳಿಗ್ಗೆಯ ವೇಳೆಗೆ 1.6 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.

ಗಂಟೆಗೆ 50ರಿಂದ 70 ಮೈಲಿ ವೇಗದಲ್ಲಿ ಬೀಸಿದ ಗಾಳಿ ಪೆನ್ಸಿಲ್ವೇನಿಯಾ, ನ್ಯೂಜೆರ್ಸಿ, ನ್ಯೂಯಾರ್ಕ್, ವರ್ಜೀನಿಯಾ ಸೇರಿದಂತೆ ಹಲವು ಪ್ರದೇಶಗಳನ್ನು ತತ್ತರಗೊಳಿಸಿದೆ. ಜರ್ಸಿ ಶೋರ್‌ನಲ್ಲಿ ಪ್ರವಾಹಕ್ಕೆ ಸಿಲುಕಿದ ಜನರು ಮತ್ತು ವಾಹನಗಳನ್ನು ರಕ್ಷಿಸಲಾಗಿದೆ. ಕೇಪ್ ಮೇನಲ್ಲಿ 16 ಹಾಗೂ ಅಟ್ಲಾಂಟಿಕ್ ಸಿಟಿಯಲ್ಲಿ 14 ಮಂದಿಯನ್ನು ರಕ್ಷಿಸಲಾಗಿದೆ.

ಅಟ್ಲಾಂಟಿಕ್ ಸಿಟಿಯಲ್ಲಿ ಸಮುದ್ರದ ನೀರಿನ ಮಟ್ಟ 8.28 ಅಡಿಗೆ ಏರಿದ್ದು, 2012ರ ಸ್ಯಾಂಡಿ ಚಂಡಮಾರುತದ ಬಳಿಕ ಗರಿಷ್ಠ ಮಟ್ಟ ದಾಖಲಿಸಿದೆ. ನ್ಯೂಜೆರ್ಸಿಯ 21 ಕೌಂಟಿಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ನ್ಯೂಯಾರ್ಕ್ ಮತ್ತು ವರ್ಜೀನಿಯಾದಲ್ಲೂ ತುರ್ತು ಕ್ರಮ ಜಾರಿಯಲ್ಲಿದೆ. ಉತ್ತರ ಕೆರೊಲಿನಾ ಮತ್ತು ಕನೆಕ್ಟಿಕಟ್‌ನಲ್ಲೂ ಹಾನಿಯಾಗಿದ್ದು, ವಿದ್ಯುತ್ ಮರುಸ್ಥಾಪನೆ ಕಾರ್ಯ ಮುಂದುವರಿದಿದೆ.

Leave a Reply

Your email address will not be published. Required fields are marked *