IFFIಯಲ್ಲಿ ನೀಮ್ ಕರೋಲಿ ಬಾಬಾ ಆಧ್ಯಾತ್ಮಿಕ ಪಯಣ ತೆರೆದಿಟ್ಟ ‘ಹನುಮಾನ್ ಅಂಶ’!

0
Hanuman-Ansh-movie-Explores-Neem-Karoli-Babas-Spiritual-Journey-at-57th-IFFI

ಪಣಜಿ: 57ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡ ‘ಹನುಮಾನ್ ಅಂಶ’ ಚಿತ್ರವು ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಆಧ್ಯಾತ್ಮಿಕ ಪಯಣವನ್ನು ಅನಾವರಣಗೊಳಿಸಿದೆ.

ಡಾ. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರವು ಉತ್ತರ ಪ್ರದೇಶದಲ್ಲಿ ಜನಿಸಿದ ಲಕ್ಷ್ಮಿನಾರಾಯಣ ಅವರ ಜೀವನವನ್ನು ಆಧರಿಸಿದೆ. ಜೀವನ, ಸಾವು ಮತ್ತು ಮಾನವ ಸಂಕಟಗಳ ಕುರಿತ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಅವರು ಆಧ್ಯಾತ್ಮಿಕತೆಯತ್ತ ಸಾಗಿದ ಪಯಣವನ್ನು ಚಿತ್ರಿಸಲಾಗಿದೆ.

ಪತ್ರಿಕಾ ಮಾಹಿತಿ ಬ್ಯೂರೋ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಚತುರ್ವೇದಿ, ತಮ್ಮ ತಾಯಿಯ ಪ್ರೇರಣೆಯಿಂದ ಈ ಚಿತ್ರ ನಿರ್ಮಾಣಕ್ಕೆ ಮುಂದಾದೆ. ನೈಜ ಜೀವನದ ಅನುಭವಗಳನ್ನು ಆಧರಿಸಿ ಕಥೆ ಹೇಳಲು ಆದ್ಯತೆ ನೀಡಿರುವುದಾಗಿ ತಿಳಿಸಿದರು.

ಸಾಮಾನ್ಯ ಮಧ್ಯಮ ಬಜೆಟ್ ಹಿಂದಿ ಚಿತ್ರದ ಸುಮಾರು ಹತ್ತನೇ ಒಂದು ಭಾಗದಷ್ಟು ವೆಚ್ಚದಲ್ಲಿ ಚಿತ್ರ ನಿರ್ಮಿಸಲಾಗಿದೆ. ಆಧ್ಯಾತ್ಮಿಕ ಕಥಾವಸ್ತುವಿಗೆ ಹೊಂದುವಂತೆ ಸರಳ ನಿರೂಪಣಾ ಶೈಲಿ ಅನುಸರಿಸಲಾಗಿದೆ ಎಂದರು.

ಉತ್ತರ ಭಾರತದಲ್ಲಿ ಲಕ್ಷ್ಮಿನಾರಾಯಣ ನಡೆಸಿದ ಆಧ್ಯಾತ್ಮಿಕ ಪಯಣ ಮತ್ತು ನೀಮ್ ಕರೋಲಿ ಬಾಬಾ ಆಗಿ ರೂಪಾಂತರಗೊಂಡ ಕಥೆಯನ್ನು ಒಳಗೊಂಡ ಟ್ರೈಲಾಜಿಯ ಮೊದಲ ಭಾಗ ಇದಾಗಿದೆ. ಅವರ ಬೋಧನೆಗಳು ಸ್ಟೀವ್ ಜಾಬ್ಸ್, ಮಾರ್ಕ್ ಜುಕರ್‌ಬರ್ಗ್ ಮತ್ತು ಜೂಲಿಯಾ ರಾಬರ್ಟ್ಸ್ ಸೇರಿದಂತೆ ಜಗತ್ತಿನ ಹಲವರಿಗೆ ಸ್ಫೂರ್ತಿಯಾಗಿವೆ.

Leave a Reply

Your email address will not be published. Required fields are marked *