ದೆಹಲಿಯಲ್ಲಿ ವಾಯುಮಾಲಿನ್ಯ ಕಳಪೆ ಮಟ್ಟಕ್ಕೆ; AQI 228 ದಾಖಲು

0
New-Delhi-1-400x400-1

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ ಬೆಳಗ್ಗೆ ವಾಯು ಗುಣಮಟ್ಟ ಸೂಚ್ಯಂಕ (AQI) 228 ದಾಖಲಾಗಿದ್ದು, ಕಳಪೆ ಮಟ್ಟದಲ್ಲಿದೆ. ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗರಿಷ್ಠ 331, ಆನಂದ್ ವಿಹಾರ್‌ನಲ್ಲಿ 327 ಹಾಗೂ ನಾರ್ತ್ ಕ್ಯಾಂಪಸ್‌ನಲ್ಲಿ 314 AQI ದಾಖಲಾಗಿದೆ.

ಮುಂದಿನ ಕೆಲವು ದಿನ ಮಳೆಯ ಸಾಧ್ಯತೆ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬೆಳಗಿನ ವೇಳೆ ಮಂಜು ಕವಿಯುವ ನಿರೀಕ್ಷೆಯಿದ್ದು, ತಾಪಮಾನ 8ರಿಂದ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಂಗಳವಾರ ದೆಹಲಿಯ ಸರಾಸರಿ AQI 200 ದಾಖಲಾಗಿತ್ತು. PM2.5 ಪ್ರಮುಖ ಮಾಲಿನ್ಯಕಾರಕವಾಗಿತ್ತು. ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ GRAP ಹಂತ-2 ಕ್ರಮಗಳನ್ನು ಮುಂದುವರಿಸಿದೆ. ರಸ್ತೆ ಸ್ವಚ್ಛತೆ, ನೀರು ಸಿಂಪಡಣೆ ಹಾಗೂ ನಿರ್ಮಾಣ ಸ್ಥಳಗಳಲ್ಲಿ ಧೂಳು ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

Leave a Reply

Your email address will not be published. Required fields are marked *