50 ಹಡಗುಗಳ ಮೇಲೆ ಸೈಬರ್ ದಾಳಿ ಶಂಕೆ; ಇರಾನ್ ಪಾತ್ರದ ಬಗ್ಗೆ ಅಮೆರಿಕ ತನಿಖೆ

ವಾಷಿಂಗ್ಟನ್: ಇಂಧನ ಸಾಗಿಸುವ ಹಡಗುಗಳು ಸೇರಿದಂತೆ ಸುಮಾರು 50 ವಾಣಿಜ್ಯ ಹಡಗುಗಳ ಮೇಲಿನ ಸೈಬರ್ ದಾಳಿಗಳ ಕುರಿತು ಅಮೆರಿಕ ತನಿಖೆ ನಡೆಸುತ್ತಿದೆ. ದಾಳಿಗಳ ಹಿಂದೆ ಇರಾನ್ ಕೈವಾಡವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಆದರೆ ಇರಾನ್ ಸಂಪರ್ಕ ಇನ್ನೂ ದೃಢಪಟ್ಟಿಲ್ಲ.
NPR ವರದಿ ಪ್ರಕಾರ, ಹ್ಯಾಕರ್ಗಳು ಹಡಗುಗಳ Fortinet ನೆಟ್ವರ್ಕ್ ಭದ್ರತಾ ಉಪಕರಣಗಳಲ್ಲಿನ ದುರ್ಬಲತೆಗಳನ್ನು ದುರುಪಯೋಗಪಡಿಸಿಕೊಂಡಿರುವ ಶಂಕೆಯಿದೆ. ಇಮೇಲ್ ವ್ಯತ್ಯಯ ಮತ್ತು ಸಂವಹನ ಸ್ಥಗಿತಗೊಂಡಿರುವುದು ದಾಳಿಯ ಸೂಚನೆಗಳಾಗಿವೆ.

ಆಗಸ್ಟ್ 21 ಮತ್ತು 24ರಂದು ಅಮೆರಿಕದ ಬಂದರುಗಳಿಗೆ ಆಗಮಿಸುತ್ತಿದ್ದ ಎರಡು ವಿದೇಶಿ ಹಡಗುಗಳನ್ನು FBI ಸಹಕಾರದೊಂದಿಗೆ ತಪಾಸಣೆ ನಡೆಸಲಾಗಿತ್ತು ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ. ಈ ಘಟನೆಗಳಲ್ಲಿ ಕಾರ್ಯಾಚರಣೆ, ಸಿಬ್ಬಂದಿ ಸುರಕ್ಷತೆ ಅಥವಾ ಪರಿಸರಕ್ಕೆ ಹಾನಿಯಾಗಿಲ್ಲ.
ಹಡಗುಗಳ ಎಂಜಿನ್, ನ್ಯಾವಿಗೇಷನ್ ಮತ್ತು ಸರಕು ನಿರ್ವಹಣಾ ವ್ಯವಸ್ಥೆಗಳಿಗೆ ಹ್ಯಾಕರ್ಗಳು ಪ್ರವೇಶಿಸಿರುವ ಸಾಧ್ಯತೆಯನ್ನೂ ಪರಿಶೀಲಿಸಲಾಗುತ್ತಿದೆ. ಇಂತಹ ದಾಳಿಗಳು ಹಡಗು ಡಿಕ್ಕಿ ಅಥವಾ ತೈಲ ಸೋರಿಕೆಯ ಅಪಾಯ ಉಂಟುಮಾಡಬಹುದು ಎಂದು ಕೋಸ್ಟ್ ಗಾರ್ಡ್ ಎಚ್ಚರಿಸಿದೆ.
