ಒಡೆದ ಪಾದಗಳಿಂದ ಮುಕ್ತಿ ಬೇಕಾ; ಸಿಂಪಲ್ ಮೆಥೆಡ್ ಫಾಲೋ ಮಾಡಿ

0

ಒಣಗಿದ ಹಾಗೂ ಒಡೆದು ಹೋದ ಪಾದಗಳ ಸಮಸ್ಯೆ ಇದೀಗ ಹೆಚ್ಚಿನ ಜನರನ್ನು ಕಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣ ಪಾದದೆಡೆಗೆ ನಾವು ತೋರುವ ನಿರ್ಲಕ್ಷ್ಯ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಸೀಳುಗಳನ್ನು ನಿರ್ಲಕ್ಷಿಸಿದರೆ ಮುಂದೆ ದೊಡ್ಡ ಪ್ರಮಾಣದ ಸಮಸ್ಯೆ ಕಟ್ಟಿಟ್ಟಬುತ್ತಿ.

ಕೆಲವೊಂದು ಈ ಒಡೆದ ಪಾದಗಳು ಚರ್ಮದ ಸೊಂಕಿಗೂ ಕಾರಣವಾಗುತ್ತದೆ. ಸುಲಭವಾಗಿ ಹಾಗೂ ಪ್ರಾಕೃತಿಕ ವಸ್ತುಗಳಿಂದ ನಿಮ್ಮ ಒಡೆದ ಪಾದಗಳಿಂದ ಮುಕ್ತಿ ಪಡೆಯಬಹುದಾಗಿದ್ದು, ನೀವು ಮಾಡಬೇಕಾಗಿದ್ದು ಇಷ್ಟೇ. ಹಾಲು ಮತ್ತು ಬೇಕಿಂಗ್ ಸೋಡಾದೊಂದಿಗೆ ಕಾಲನ್ನು ತೊಳೆಯುವುದರಿಂದ ಅಚ್ಚರಿ ಹಾಗೂ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.

ಹಾಲನ್ನು ನ್ಯಾಜುರಲ್ ಮಾಯಿಸ್ಚರೈಸರ್ ಎಂದೇ ಕರೆಯಲಾಗುತ್ತದೆ. ಒಂದು ಕಪ್ ಹಾಲಿಂದ ಕಾಲನ್ನು ನಿಧಾನವಾಗಿ ತೊಳೆಯಿರಿ. ಇದರಿಂದ ಕಾಲಿನ ಚರ್ಮಗಳು ಮೃದುವಾಗುತ್ತದೆ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ನಿಮ್ಮ ಚರ್ಮವನ್ನು ಮೃದುಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಕೊಂಚ ಹಾಲಿನೊಂದಿಗೆ ಪಾದವನ್ನು ಮಸಾಜ್ ಮಾಡಿದ ಬಳಿಕ ಹಾಲು ಹಾಗೂ ಬೇಕಿಂಗ್ ಪೌಡರ್ ಮಿಶ್ರಣದಲ್ಲಿ ನಿಮ್ಮ ಪಾದವನ್ನು ಕೆಲಕಾಲ ಇಡಿ. 10 ನಿಮಿಷಗಳ ಬಳಿಕ ಕಾಲನ್ನು ಹೊರತೆಗೆದು ಡೆಡ್ ಸ್ಕಿನ್ ಗಳನ್ನು ತೆಗೆಯಿರಿ. ಹೀಗೆ ವಾರಕ್ಕೆ ಮೂರು ಬಾರಿಯಾದರೂ ಮಾಡುವುದರಿಂದ ಒಡೆದ ಪಾದಗಳಿಂದ ಮುಕ್ತಿಪಡೆಯಬಹುದು.

Leave a Reply

Your email address will not be published. Required fields are marked *

You may have missed