ನಾಗಾರ್ಜುನ 100ನೇ ಸಿನಿಮಾ ‘ಕಿಂಗ್ 100’; ಡಿಸೆಂಬರ್ 24ರಂದು ತೆರೆಗೆ

ಹೈದರಾಬಾದ್: ನಟ ನಾಗಾರ್ಜುನ ಅಕ್ಕಿನೇನಿ ಅವರ ವೃತ್ತಿಜೀವನದ 100ನೇ ಚಿತ್ರಕ್ಕೆ ‘ಕಿಂಗ್ 100’ ಎಂದು ಶೀರ್ಷಿಕೆ ಇಡಲಾಗಿದೆ. ಆರ್.ಎ. ಕಾರ್ತಿಕ್ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 24ರಂದು ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ನಿರ್ಮಾಪಕರು ಶನಿವಾರ ಘೋಷಿಸಿದ್ದಾರೆ.
ನಾಗಾರ್ಜುನ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅನ್ನಪೂರ್ಣ ಸ್ಟುಡಿಯೋಸ್ ಚಿತ್ರದ ಶೀರ್ಷಿಕೆಯೊಂದಿಗೆ ಬಹುನಿರೀಕ್ಷಿತ ಮೊದಲ ಗ್ಲಿಂಪ್ಸ್ ಬಿಡುಗಡೆ ಮಾಡಿದೆ. ಸುಮಾರು ಒಂದು ವರ್ಷದಿಂದ ನಿರ್ಮಾಣ ಹಂತದಲ್ಲಿದ್ದ ಸಿನಿಮಾವನ್ನು ಸಾಕಷ್ಟು ಗೌಪ್ಯವಾಗಿ ಇಡಲಾಗಿತ್ತು.

ಸುಮಾರು ಒಂದೂವರೆ ನಿಮಿಷದ ಗ್ಲಿಂಪ್ಸ್ನಲ್ಲಿ ನಾಗಾರ್ಜುನ ಅವರನ್ನು ವಿಭಿನ್ನ ಹಾಗೂ ಸ್ಟೈಲಿಶ್ ಅವತಾರದಲ್ಲಿ ಪರಿಚಯಿಸಲಾಗಿದೆ. ‘‘ಈ ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಹಣವಿರುವವರು ಮತ್ತು ಹಣವಿಲ್ಲದವರು. ನನ್ನಲ್ಲಿ ಹಣವಿಲ್ಲದಾಗ ಅವರು ನನ್ನನ್ನು ಸೋತವನು ಎಂದರು. ಹಣವಿದ್ದಾಗ ರಾಜ ಎಂದರು. ಆದರೆ ಈ ಗುರುತು ಹಣಕ್ಕಿಂತ ಹೆಚ್ಚು ಶಕ್ತಿಶಾಲಿ’’ ಎಂಬ ಸಂಭಾಷಣೆ ಗಮನ ಸೆಳೆದಿದೆ.
ONE KING 👑
∞ SWAG 🔥LONG LIVE THE KING 👑❤️#KING100 Glimpse OUT NOW 🤩🤩
▶️https://t.co/VtGabd4yn8IN CINEMAS DECEMBER 24th, 2026.#LongLiveTheKing #HBDKingNagarjuna
King @iamnagarjuna @Rakarthik_dir @ThisIsDSP @rajamahadhevan @NavinNooli @ArtSathees @CVRao74… pic.twitter.com/unuOIEqX9D
— Annapurna Studios (@AnnapurnaStdios) August 29, 2026
‘ಕಿಂಗ್ 100’ ಚಿತ್ರವನ್ನು ಆರ್.ಎ. ಕಾರ್ತಿಕ್ ಬರೆದು ನಿರ್ದೇಶಿಸಿದ್ದು, ಅನ್ನಪೂರ್ಣ ಸ್ಟುಡಿಯೋಸ್ ನಿರ್ಮಿಸುತ್ತಿದೆ. ದೇವಿ ಶ್ರೀ ಪ್ರಸಾದ್ ಸಂಗೀತ, ರಾಜ ಮಹಾದೇವನ್ ಛಾಯಾಗ್ರಹಣ, ಸತೀಶ್ ಕುಮಾರ್ ಎನ್. ನಿರ್ಮಾಣ ವಿನ್ಯಾಸ ಹಾಗೂ ನವೀನ್ ನೂಲಿ ಸಂಕಲನ ನಿರ್ವಹಿಸಿದ್ದಾರೆ.
ಪೂರ್ವಾ, ರಜಿನಿ, ತಾನ್ಯಾ ಮತ್ತು ಬ್ರಹ್ಮ ವೇಷಭೂಷಣ ವಿನ್ಯಾಸ ಮಾಡಿದ್ದು, ವೆಂಕಟ್, ಪೃಥಿವಿ, ನಬಕಾಂತ್, ರಿಯಲ್ ಸತೀಶ್ ಹಾಗೂ ದಿನೇಶ್ ಕಾಸಿ ಸಾಹಸ ಸಂಯೋಜಿಸಿದ್ದಾರೆ.
