“ಪಹಲ್ಗಮ್ ಘಟನೆ ಮರುಕಳಿಸಬಾರದು: ನಾವೂ ಕೇಂದ್ರದ ಜೊತೆಗಿರುತ್ತೇವೆ”; ಪದ್ಮರಾಜ್

0
Padmaraj-R-Kudroli-KPCC-300x185

ಮಂಗಳೂರು: ಕಾಶ್ಮೀರದ ಫಹಲ್ಗಾಮ್‌ನಲ್ಲಿ ಉಗ್ರವಾದಿಗಳಿಂದ ನಡೆದ ಪ್ರವಾಸಿಗರ ಹತ್ಯೆಯ ಹೃದಯ ವಿದ್ರಾವಕ ಘಟನೆ ಇಡೀ ಮಾನವ ಕುಲಕೆ ಮಾರಕ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.
ಫಹಲ್ಗಾಮ್‌ ಕೃತ್ಯವನ್ನು ಖಂಡಿಸಿರುವ ಪದ್ಮರಾಜ್ ಪೂಜಾರಿ, ನ್ಯಾಯ ಮತ್ತು ಶಾಂತಿ ಬಯಸುವ ಸವಾಜದಲ್ಲಿ ಹಿಂಸೆಗೆ ಸ್ಥಾನ ಇರಬಾರದು ಎಂದು ಪ್ರತಿಪಾದಿಸಿದ್ದಾರೆ.

ಪ್ರತಿಯೊಂದು ಜೀವವೂ ಅಮೂಲ್ಯವಾಗಿದ್ದು, ಜೀವ ನಷ್ಟವು ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಆದ ಗಾಯ. ಅಮಾಯಕರ ಪ್ರಾಣಹತ್ಯೆ ಮಾಡಿರುವ ಈ ಘಟನೆ ಅತ್ಯಂತ ಖಂಡನೀಯ. ಅವಾಯಕರ ಜೀವಗಳನ್ನು ಬಲಿಯಾಗಿಸಿ, ಅನೇಕ ಕುಟುಂಬಗಳನ್ನೇ ನಾಶ ಮಾಡಿರುವುದು ಹಿಂಸಾಚಾರವಷ್ಟೇ ಅಲ್ಲ. ಸಂಪೂರ್ಣ ಅವಾನವೀಯ ಕೃತ್ಯ. ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ದಾಳಿ ನಡೆದಿರುವುದು ಕೆಟ್ಟ ಬೆಳವಣಿಗೆ ಎಂದಿದ್ದಾರೆ.

ಈ ವಿಚಾರದಲ್ಲಿ ನಾವು ಪಕ್ಷ ಭೇದ ಮರೆತು ಕೇಂದ್ರ ಸರ್ಕಾರದ ಪರ ನಿಲ್ಲುತ್ತೇವೆ. ಭಯೋತ್ಪಾದಕರನ್ನು ನಿರ್ಮೂಲನೆಗೊಳಿಸುವ ಜೊತೆಗೆ ದೇಶದ ಜನರಿಗೆ ಭದ್ರತೆ ನೀಡುವ ಕಾರ್ಯವನ್ನು ಕೇಂದ್ರ ಸಮರ್ಥವಾಗಿ ನಿರ್ವಹಿಸಬೇಕು. ಇಂತಹ ಭಯೋತ್ಪಾದಕ ಸಂಘಟನೆಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು. ಇಂತಹ ಸಂಘಟನೆಗಳು ಯಾವುದೇ ದೇಶಕ್ಕೆ ಸಂಬಂಧಿಸಿದರೂ ಅವುಗಳನ್ನು ಬುಡಸಮೇತ ಕಿತ್ತೊಗೆಯುವ ಕೆಲಸವಾಗಬೇಕು. ಅಮಾಯಕರನ್ನು ಕೊಂದ ಉಗ್ರರಿಗೆ ಕೇಂದ್ರ ಸರ್ಕಾರ ತಕ್ಕ ಉತ್ತರ ನೀಡಬೇಕು. ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕು. ಎಂದು ಪದ್ಮರಾಜ್ ಪೂಜಾರಿ ಆಗ್ರಹಿಸಿದ್ದಾರೆ. ಉಗ್ರರ ದಾಳಿಗೆ ಬಲಿಯಾದವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ಸಿಗಲಿ. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಅವರು ಪ್ರಾರ್ಥಿಸಿದ್ದಾರೆ.

Leave a Reply

Your email address will not be published. Required fields are marked *