ನಿಂದನೆ, ಅಪಮಾನ ಸಹಿಸುವುದಿಲ್ಲ; ಬ್ರಾಹ್ಮಣ ಮಹಾಸಭಾ ರಣಕಹಳೆ

0
Brahmin Mahasabha President S. Raghunath- R. Laxmikant Protest

ಬೆಂಗಳೂರು: ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆದು ಪರೀಕ್ಷೆ ಬರೆಯುವಂತೆ ವಿದ್ಯಾರ್ಥಿಗೆ ಹೇಳಿರುವ ಘಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಖಂಡಿಸಿದೆ. ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಹಾಸಭಾ ಮುಖ್ಯಸ್ಥರು, ಇಂತಹ ಕಹಿ ಘಟನೆಗಳು ವಿಪ್ರ ಸಮುದಾಯಕ್ಕೆ ಮಾಡಿರುವ ಅಪಮಾನ ಎಂದು ಆಕ್ರೋಶ ಹೊರಹಾಕಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಎಸ್.ರಘುನಾಥ್, ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್, ವಿಪ್ರ ಮುಖಂಡರಾದ ರವಿಶಂಕರ, ಶಂಕರನಾರಾಯಣ್ ಶಾಸ್ತ್ರಿ, ಶ್ರೀನಿವಾಸಮೂರ್ತಿ ಜೋಯಿಸ್ ಮೊದಲಾದವರು ಸುದ್ದಿಗೋಷ್ಠಿ ನಡೆಸಿದರು. ಎಸ್.ರಘುನಾಥ್ ಮಾತನಾಡಿ ಬ್ರಾಹ್ಮಣ ಸಮಾಜವನ್ನು ಹೀಯಾಳಿಸುವುದು, ನಿಂದಿಸುವುದು, ಅಪಹಾಸ್ಯಕ್ಕೆ ಒಳಪಡಿಸುವುದು ಮತ್ತು ಬ್ರಾಹ್ಮಣರ ಮೇಲೆ ದೌರ್ಜನ್ಯ ವೆಸುಗುವುದು ಸಾಮಾನ್ಯವಾಗಿದೆ. ಬ್ರಾಹ್ಮಣರು ಅಲ್ಪಸಂಖ್ಯಾತರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂತಹ ಕಹಿ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ. ಶಿಕ್ಷಣ ಸಚಿವರು ವಿದ್ಯಾರ್ಥಿ ಪರೀಕ್ಷೆ ಬರೆಯಲು ಅವಕಾಶ ನೀಡುತ್ತೇವೆ ಎಂದು ಹೇಳಿದ್ದಾರೆ ಮತ್ತು ಸಿ.ಇ.ಟಿ.ಪ್ರಾಧಿಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿರುವುದು ಸಮಾಧಾನಕರ ಸಂಗತಿ ಎಂದರು.

ಜನಿವಾರ ಕಿತ್ತು ಹಾಕಿರುವುದರಿಂದ ಬ್ರಾಹ್ಮಣ ಸಮುದಾಯದವರು ರಾಜ್ಯಾದ್ಯಂತ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಪ್ರತಿಭಟನೆಯಾಗುತ್ತಿದೆ. ವಿಪ್ರ ಸಮುದಾಯದಕ್ಕೆ ಆಗಿರುವ ನೋವು, ಸಂಕಷ್ಟಗಳು ಎದುರಿಸುತ್ತಿರುವ ಸಮಸ್ಯೆಗಳು ಕುರಿತು ಮಹಾಸಭಾ ದಿಂದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಿ.ಇ.ಟಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಬ್ರಾಹ್ಮಣ ವಿದ್ಯಾರ್ಥಿಗೆ ಶಿಕ್ಷಣಕ್ಕೆ ಬೇಕಾದ ಆರ್ಥಿಕ ಸಹಾಯ ಮಹಾಸಭಾದಿಂದ ನೀಡಲಾಗುವುದು, ನಮ್ಮ ಸಂಪ್ರಾದಯ, ಸಂಸ್ಕೃತಿ ಎತ್ತಿಹಿಡಿದಿದ್ದಾನೆ ಎಂದು ಹೇಳಿದರು.

ಆರ್.ಲಕ್ಷ್ಮಿಕಾಂತ್ ಮಾತನಾಡಿ, ಯಾರು ಏನು ಬೇಕಾದರು ಬ್ರಾಹ್ಮಣರ ಮೇಲೆ ದಬ್ಬಾಳಿಕೆ ಮಾಡಬಹುದು ಎಂದು ತಿಳಿದಿದ್ದಾರೆ. ಜನಿವಾರ ವಿವಾದದಿಂದ ಇಡೀ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ ಎಂದರು. ಪರೀಕ್ಷೆ ಬರೆಯಲು ಲಕ್ಷಾಂತರ ವಿದ್ಯಾರ್ಥಿಗಳು ಬರುತ್ತಾರೆ. ಅದರಲ್ಲಿ ಬ್ರಾಹ್ಮಣ ವಿದ್ಯಾರ್ಥಿಗೆ ಈ ಪರೀಕ್ಷೆ ಮಾಡಬೇಕು ಎಂದರೆ ಪೂರ್ವನಿಯೋಜಿತ ಸಂಚು ಎಂದು ಕಾಣುತ್ತದೆ ಎಂದು ಸಂಶಯ ವ್ಯಕ್ತಪಡಿಸಿದರು.

ಸಂವಿಧಾನದಲ್ಲಿ ಬ್ರಾಹ್ಮಣರಿಗೆ ಬದುಕಲು ಅವಕಾಶ ನೀಡಿದೆ.
ಬ್ರಾಹ್ಮಣರಿಗೆ ಅಪಮಾನ, ತೇಜೋವಧೆ ಮಾಡಿದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದ ಅವರು, ಸರ್ಕಾರ ಇಂತಹ ಘಟನೆಗಳ ವಿರುದ್ದ ತತಕ್ಷಣ ಕ್ರಮ ಕೈಗೊಳ್ಳಬೇಕು, ಹೋಂ ಗಾರ್ಡ್ ಕೆಲಸದ ಆದೇಶ ಪಾಲಿಸುತ್ತಾನೆ ಅವನನ್ನ ಬಲಿಪಶು ಮಾಡುವ ಬದಲು ಅಧಿಕಾರಿಗಳ ತಲೆದಂಡವಾಗಬೇಕು ಎಂದರು.

ಜಿಲ್ಲಾ ಪ್ರತಿನಿಧಿಗಳಾದ ಜಿ.ಎಸ್.ನಾಗೇಶ್, ಸತೀಶ್ ಉರಾಳ್,ಕೆ.ಎನ್.ರವಿಕುಮಾರ್, ಅಂಬಿಕಾ ರಾಮಚಂದ್ರ, ಮಂಜುನಾಥ್ ವಿಪ್ರ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *