‘… 10 ವರ್ಷ’! ಭಾವುಕ ಪತ್ರ ಹಂಚಿಕೊಂಡ ವಿಜಯ್ ದೇವರಕೊಂಡ

0
Vijay-Devarakonda-rASHMIKA-300x172-1

ಹೈದರಾಬಾದ್: ನಟ ವಿಜಯ್ ದೇವರಕೊಂಡ ಅವರ ಸಿನಿಜೀವನಕ್ಕೆ ಮಹತ್ವದ ತಿರುವು ನೀಡಿದ ‘ಪೆಳ್ಳಿ ಚೂಪುಲು’ ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷಗಳು ಪೂರ್ಣಗೊಂಡಿವೆ. ಈ ವಿಶೇಷ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಅವರು ಸಾಮಾಜಿಕ ಜಾಲತಾಣ Xನಲ್ಲಿ ಭಾವುಕ ಪತ್ರವನ್ನು ಹಂಚಿಕೊಂಡು ಅಭಿಮಾನಿಗಳು, ನಿರ್ದೇಶಕ ಹಾಗೂ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

‘ಪೆಳ್ಳಿ ಚೂಪುಲು’ ಚಿತ್ರದ ಚಿತ್ರೀಕರಣದ ಹಳೆಯ ಫೋಟೋಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿರುವ ವಿಜಯ್, “ಹತ್ತು ವರ್ಷಗಳ ಹಿಂದೆ ಚಿತ್ರಮಂದಿರದಲ್ಲಿ ಎಲ್ಲರೂ ಭೇಟಿಯಾಗಿ ನಕ್ಕು, ಪ್ರೀತಿಸಿ, ಇಂದಿಗೂ ಮುಂದುವರಿದಿರುವ ಒಂದು ಬಂಧವನ್ನು ಕಟ್ಟಿಕೊಂಡಿದ್ದೇವೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ” ಎಂದು ಬರೆದುಕೊಂಡಿದ್ದಾರೆ.

ಈ ಸಿನಿಮಾ ತಮ್ಮ ಜೀವನದಲ್ಲಿ ಮಹತ್ವದ ತಿರುವಾಗಿದ್ದು, ಯುವಕನಾಗಿದ್ದ ತಮ್ಮ ಕನಸುಗಳಿಗೆ ಅದು ಹೊಸ ಬಲ ನೀಡಿತು ಎಂದು ಅವರು ನೆನಪಿಸಿಕೊಂಡಿದ್ದಾರೆ. “ಕನಸು ಕಾಣುವುದು ತಪ್ಪಲ್ಲ ಎಂಬ ಆತ್ಮವಿಶ್ವಾಸವನ್ನು ಈ ಸಿನಿಮಾ ನನಗೆ ಕೊಟ್ಟಿತು. ನನ್ನ ತೆಲುಗು ಪ್ರೇಕ್ಷಕರಿಗೆ ಹೃದಯಪೂರ್ವಕ ಧನ್ಯವಾದಗಳು” ಎಂದು ಹೇಳಿದ್ದಾರೆ.

ಚಿತ್ರದ ನಿರ್ದೇಶಕ ತರುಣ್ ಭಾಸ್ಕರ್ ಅವರನ್ನು ವಿಶೇಷವಾಗಿ ಸ್ಮರಿಸಿರುವ ವಿಜಯ್, “ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನೊಂದಿಗೆ ಈ ಸಿನಿಮಾ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ನೀನು ಅಮೂಲ್ಯ ವ್ಯಕ್ತಿ” ಎಂದು ಭಾವುಕರಾಗಿದ್ದಾರೆ. ಜೊತೆಗೆ ನಟರಾದ ಪ್ರಿಯದರ್ಶಿ, ರಿತು ವರ್ಮಾ, ಅಭಯ್, ನಾಗೇಶ್, ಸಂಗೀತ ನಿರ್ದೇಶಕ ವಿವೇಕ್ ಸಾಗರ್ ಹಾಗೂ ಇಡೀ ಚಿತ್ರತಂಡಕ್ಕೆ ಪ್ರೀತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

ಚಿತ್ರಕ್ಕೆ ಅವಕಾಶ ನೀಡಿದ ನಿರ್ಮಾಪಕರಾದ ಯಶ್ ರಂಗಿನೇನಿ ಮತ್ತು ರಾಜ್ ಕಂಡುಕೂರಿ ಅವರಿಗೂ ವಿಜಯ್ ಧನ್ಯವಾದ ಅರ್ಪಿಸಿದ್ದಾರೆ. “ಎಲ್ಲರೂ ನಮ್ಮನ್ನು ತಿರಸ್ಕರಿಸಿದಾಗ ನಮ್ಮ ಮೇಲೆ ನಂಬಿಕೆ ಇಟ್ಟವರು ಅವರೇ” ಎಂದು ಅವರು ಹೇಳಿದ್ದಾರೆ.

ತಮ್ಮ ಪೋಸ್ಟ್‌ನ ಕೊನೆಯಲ್ಲಿ, “ಇಂದು ನಾನು ಆ ಮುಕ್ತ ಮನಸ್ಸಿನ ಯುವಕನಾಗಿಲ್ಲ. ಜೀವನ ಸಂಪೂರ್ಣವಾಗಿದೆ, ಆದರೆ ಹೆಗಲ ಮೇಲಿನ ಜವಾಬ್ದಾರಿಯ ಭಾರ ಹೆಚ್ಚಾಗಿದೆ. ಇನ್ನು ಮುಂದೆ ನಾನು ಮಾಡುವ ಪ್ರತಿಯೊಂದು ಕೆಲಸವೂ ಹೃದಯದಿಂದಲೇ ಆಗಲಿದೆ. ನಿರ್ದೇಶಕರು, ಕುಟುಂಬ, ಸ್ನೇಹಿತರು, ಅಭಿಮಾನಿಗಳು ಹಾಗೂ ನನ್ನ ಪ್ರೇಕ್ಷಕರಿಗೆ ನನ್ನ ಪ್ರೀತಿಯೇ ದೊಡ್ಡ ಶಕ್ತಿ” ಎಂದು ವಿಜಯ್ ದೇವರಕೊಂಡ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

10 years.

Something feels very strange about reading that 10 years ago we all met in the theatres 🙂 that we laughed and fell in love and formed a bond that keeps us together till today.

Something feels very heavy.

That day meant to a young me more than anything that has… pic.twitter.com/z5nKzhEtyr

— Vijay Deverakonda (@TheDeverakonda) July 29, 2026

Leave a Reply

Your email address will not be published. Required fields are marked *