ಐಪಿಎಲ್ 2026: ರಾಜಸ್ಥಾನ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಗೆಲುವು

0
Delhi Capitals - IPL 2026

ಅಹಮದಾಬಾದ್: ಐಪಿಎಲ್ 2026 (IPL 2026) ರ 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ರೋಚಕ ಗೆಲುವು ಸಾಧಿಸಿದೆ. ರಾಜಸ್ಥಾನ್ ನೀಡಿದ 225 ರನ್‌ಗಳ ಬೃಹತ್ ಗುರಿಯನ್ನು ಡೆಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಬೆನ್ನಟ್ಟಿತು.

ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡು 225 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಆರಂಭದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ವಿಫಲರಾದರೂ, ರಿಯಾನ್ ಪರಾಗ್ (90) ಮತ್ತು ಡೊನೊವನ್ ಫೆರೇರಾ (47) ಅವರ ಹೊಡೆತಗಳಿಂದ ತಂಡ ದೊಡ್ಡ ಮೊತ್ತ ತಲುಪಿತು.

225 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಕೆಎಲ್ ರಾಹುಲ್ (75), ಪಾತುಮ್ ನಿಸ್ಸಂಕಾ (62), ನಿತೀಶ್ ರಾಣಾ (33) ಹಾಗೂ ಅಶುತೋಷ್ ಶರ್ಮಾ (ಅಜೇಯ 25) ಅವರ ಉತ್ತಮ ಆಟದಿಂದ ಡೆಲ್ಲಿ 19.1 ಓವರ್‌ಗಳಲ್ಲಿ ಗುರಿ ತಲುಪಿತು.

ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಇತಿಹಾಸದಲ್ಲೇ ಅತಿದೊಡ್ಡ ರನ್‌ಗಳ ಬೆನ್ನಟ್ಟಿದ ದಾಖಲೆಯನ್ನು ನಿರ್ಮಿಸಿದೆ. ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದರೆ, ರಾಜಸ್ಥಾನ್ ರಾಯಲ್ಸ್ 4ನೇ ಸ್ಥಾನದಲ್ಲೇ ಉಳಿದಿದೆ. ಇದು ಡೆಲ್ಲಿಗೆ ಈ ಸೀಸನ್‌ನ 4ನೇ ಗೆಲುವಾಗಿದೆ.

Leave a Reply

Your email address will not be published. Required fields are marked *

You may have missed