ಹಳಿತಪ್ಪಿದ ಕೋಲ್ಕತಾ–ಸೈರಾಂಗ್ ಎಕ್ಸ್‌ಪ್ರೆಸ್ ರೈಲು; ಅಸ್ಸಾಂನ ದಿಗಾರು ನಿಲ್ದಾಣದ ಬಳಿ ಅವಘಡ

0
Train-Railway-Track-750x428-1

ಗುವಾಹಟಿ: ಅಸ್ಸಾಂನ ಗುವಾಹಟಿ ಸಮೀಪ ಕೋಲ್ಕತಾ–ಸೈರಾಂಗ್ ಎಕ್ಸ್‌ಪ್ರೆಸ್ ರೈಲು ಬುಧವಾರ ಬೆಳಗ್ಗೆ ಹಳಿತಪ್ಪಿ ಅಪಘಾತಕ್ಕೀಡಾಗಿದೆ. ಬೆಳಗ್ಗೆ 6.54ರ ಸುಮಾರಿಗೆ ದಿಗಾರು ರೈಲು ನಿಲ್ದಾಣದ ಬಳಿ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಮಿಜೋರಾಂನ ಸೈರಾಂಗ್‌ನಿಂದ ಕೋಲ್ಕತ್ತಾ ಕಡೆಗೆ ತೆರಳುತ್ತಿದ್ದ ರೈಲಿನ ಎಂಜಿನ್ ಸೇರಿದಂತೆ ಆರು ಅಥವಾ ಏಳು ಬೋಗಿಗಳು ಹಳಿ ತಪ್ಪಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಗಾಯಾಳುಗಳ ನಿಖರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ.

ರೈಲು ಹಳಿತಪ್ಪಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ರೈಲ್ವೆ ಅಧಿಕಾರಿಗಳು ಘಟನೆಯ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *