ಮಾದಕ ವಸ್ತು ಜಾಲ ಭೇದಿಸಲು ಭಾರತ–ಅಮೆರಿಕ ಜಂಟಿ ಕಾರ್ಯಾಚರಣೆ; ದ್ವಿಪಕ್ಷೀಯ ಚರ್ಚೆ

0
Us-India-America-India-co-operation

ನವದೆಹಲಿ: ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲಗಳನ್ನು ಭೇದಿಸಲು ಭಾರತ ಮತ್ತು ಅಮೆರಿಕ ಸಹಕಾರ ಬಲಪಡಿಸಲು ನಿರ್ಧರಿಸಿವೆ. ಸಿಂಥೆಟಿಕ್ ಮಾದಕವಸ್ತು ತಯಾರಿಕೆಗೆ ಬಳಸುವ ರಾಸಾಯನಿಕಗಳ ಅಕ್ರಮ ಪೂರೈಕೆ ತಡೆಯುವುದು, ಗುಪ್ತಚರ ಮಾಹಿತಿ ವಿನಿಮಯ ಹಾಗೂ ಜಂಟಿ ಪೊಲೀಸ್ ಕಾರ್ಯಾಚರಣೆಗಳಿಗೆ ಆದ್ಯತೆ ನೀಡಲಾಗಿದೆ.

ನವದೆಹಲಿಯಲ್ಲಿ ನವೆಂಬರ್ 2 ಮತ್ತು 3ರಂದು ನಡೆದ ಎರಡನೇ ಭಾರತ–ಅಮೆರಿಕ ಮಾದಕವಸ್ತು ನೀತಿ ಸಭೆಯಲ್ಲಿ ಈ ಕುರಿತು ಚರ್ಚಿಸಲಾಯಿತು. ಭಾರತೀಯ ನಿಯೋಗಕ್ಕೆ ಎನ್‌ಸಿಬಿ ಮಹಾನಿರ್ದೇಶಕ ಅನುರಾಗ್ ಗರ್ಗ್, ಅಮೆರಿಕ ನಿಯೋಗಕ್ಕೆ ಡೆಬ್ಬಿ ಸೆಗುಯಿನ್ ನೇತೃತ್ವ ವಹಿಸಿದ್ದರು.

ಮಾದಕವಸ್ತು ಜಾಲಗಳ ಹಣಕಾಸುದಾರರು, ಪೂರೈಕೆದಾರರು ಮತ್ತು ಸಾಗಣೆದಾರರನ್ನು ಗುರಿಯಾಗಿಸುವ ಭಾರತದ ವಿಷನ್ ರೋಡ್‌ಮ್ಯಾಪ್ 2026–2029 ಕುರಿತು ಸಭೆಯಲ್ಲಿ ಚರ್ಚೆಯಾಯಿತು.

2025ರ ಜುಲೈನಲ್ಲಿ ನಡೆದ ಆಪರೇಷನ್ ಮೆಡ್‌ಮ್ಯಾಕ್ಸ್‌ನಲ್ಲಿ ಅಂತರರಾಷ್ಟ್ರೀಯ ಔಷಧ ಮಾರಾಟ ಜಾಲ ಪತ್ತೆಯಾಗಿತ್ತು. ಏಪ್ರಿಲ್‌ನಲ್ಲಿ ಆರಂಭವಾದ ಆಪರೇಷನ್ ವೈಪ್ ಮೂಲಕ ಫೆಂಟನಿಲ್ ಸೇರಿದಂತೆ 62 ವಸ್ತುಗಳಿಗೆ ಸಂಬಂಧಿಸಿದ 122 ಅಕ್ರಮ ಆನ್‌ಲೈನ್ ಪಟ್ಟಿಗಳನ್ನು ಗುರುತಿಸಲಾಗಿದೆ. ಕಳ್ಳಸಾಗಣೆ ಜಾಲಗಳ ಬದಲಾಗುತ್ತಿರುವ ತಂತ್ರಗಳನ್ನು ಎದುರಿಸಲು ನಿರಂತರ ಮಾಹಿತಿ ವಿನಿಮಯಕ್ಕೆ ಉಭಯ ದೇಶಗಳು ಒಪ್ಪಿವೆ.

Leave a Reply

Your email address will not be published. Required fields are marked *

You may have missed