ಮಿಜೋರಾಂನಲ್ಲಿ ಕಣ್ಮನ ಸೆಳೆಯುವ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯ

0
Freedom-Fighters-Museum-in-Mizoram

ಐಜ್ವಾಲ್: ಮಿಜೋರಾಂನ ಐಜ್ವಾಲ್ ಜಿಲ್ಲೆಯ ಐಬಾಕ್ ಬ್ಲಾಕ್‌ನ ಕೆಲ್ಸಿಹ್ ಗ್ರಾಮದಲ್ಲಿ ರೊಪುಯಿಲಿಯಾನಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯ (RTFFM) ಸ್ಥಾಪಿಸಲಾಗಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಕೇಂದ್ರ ಸರ್ಕಾರ ₹25.59 ಕೋಟಿ ಅನುದಾನ ನೀಡಿದೆ.

ವಸ್ತುಸಂಗ್ರಹಾಲಯ ಸಂಕೀರ್ಣದಲ್ಲಿ ಬಯಲು ರಂಗಮಂದಿರ, ಸಾಂಪ್ರದಾಯಿಕ ಗುಡಿಸಲು, ಹೆರಿಟೇಜ್ ವಾಕ್, ಬಿರ್ಸಾ ಮುಂಡಾ ಬುಡಕಟ್ಟು ಗೌರವ ಉದ್ಯಾನವನ, ಕೆಫೆಟೇರಿಯಾ ಹಾಗೂ ಸಿಬ್ಬಂದಿ ವಸತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನಿರ್ಮಿಸಲಾಗಿದೆ.

ಮಿಜೋ ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ, ತ್ಯಾಗ ಮತ್ತು ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಈ ವಸ್ತುಸಂಗ್ರಹಾಲಯ ಸ್ಥಾಪಿಸಲಾಗಿದೆ. ಇದನ್ನು ವಿಶ್ವಮಟ್ಟದ ಪ್ರವಾಸಿ ಮತ್ತು ಪರಂಪರೆಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಅಗತ್ಯವನ್ನು ರಾಜ್ಯಪಾಲರು ಒತ್ತಿಹೇಳಿದ್ದಾರೆ.

ಬ್ರಿಟಿಷರ ವಿರುದ್ಧ ನಡೆದ ಬುಡಕಟ್ಟು ಚಳವಳಿಗಳು ಮತ್ತು ಹೋರಾಟಗಳ ಇತಿಹಾಸವನ್ನು ಸಂರಕ್ಷಿಸಲು ಕೇಂದ್ರ ಸರ್ಕಾರ 10 ರಾಜ್ಯಗಳಲ್ಲಿ 11 ಇಂತಹ ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸುತ್ತಿದೆ. ಮಣಿಪುರದ ತಮೆಂಗ್ಲಾಂಗ್‌ನಲ್ಲಿಯೂ ಇದೇ ಮಾದರಿಯ ವಸ್ತುಸಂಗ್ರಹಾಲಯ ನಿರ್ಮಾಣ ಹಂತದಲ್ಲಿದೆ.

Leave a Reply

Your email address will not be published. Required fields are marked *