ಪೆರುವಿನಲ್ಲಿ 6.7 ತೀವ್ರತೆಯ ಭೂಕಂಪ; ಜಪಾನ್‌ನಲ್ಲೂ ಕಂಪನ

0
Earthquake-1-750x403-1

ಲಿಮಾ: ಪೆರುವಿನ ಮಧ್ಯಭಾಗದಲ್ಲಿ ಶನಿವಾರ 6.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ರಾಜಧಾನಿ ಲಿಮಾದಲ್ಲಿ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. USGS ಪ್ರಕಾರ, 108 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರ ಪತ್ತೆಯಾಗಿದೆ. ಯಾವುದೇ ಸುನಾಮಿ ಎಚ್ಚರಿಕೆ ನೀಡಿಲ್ಲ.

ಇದೇ ವೇಳೆ, ಜಪಾನ್‌ನ ಕುಮಾಮೊಟೊ ಪ್ರಾಂತ್ಯದಲ್ಲಿ ಗುರುವಾರ 5.7 ತೀವ್ರತೆಯ ಭೂಕಂಪ ಸಂಭವಿಸಿದೆ. ಅಮಾಕುಸಾ-ಅಶಿಕಿಟಾ ಪ್ರದೇಶದಲ್ಲಿ 10 ಕಿ.ಮೀ. ಆಳದಲ್ಲಿ ಕಂಪನ ದಾಖಲಾಗಿದೆ. ಮುಂದಿನ ಒಂದು ವಾರ ಎಚ್ಚರಿಕೆಯಿಂದ ಇರುವಂತೆ ಜಪಾನ್ ಹವಾಮಾನ ಸಂಸ್ಥೆ ಸೂಚಿಸಿದೆ.

ಮಿನಾಮಾಟಾ ಮತ್ತು ಕುಮಾ ನಗರಾಡಳಿತಗಳು ಸ್ಥಳಾಂತರಕ್ಕೆ ಸೂಚಿಸಿದ್ದು, ಕ್ಯುಶು ಶಿಂಕಾನ್ಸೆನ್‌ನ ಎಂಟು ಬುಲೆಟ್ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ಸುಮಾರು 5,600 ಪ್ರಯಾಣಿಕರಿಗೆ ತೊಂದರೆಯಾಗಿದೆ.

Leave a Reply

Your email address will not be published. Required fields are marked *