‘ಹೊಸ ಪೀಠ ಸ್ಥಾಪನೆ ಉದ್ದೇಶ ಇಲ್ಲ’; ಹರಿಹರ ಪೀಠ ವಿವಾದಕ್ಕೆ ಪರಿಹಾರ ದಿಕ್ಕಿನಲ್ಲಿ ಹೆಜ್ಜೆ: ಯತ್ನಾಳ್

0
Basanagowda Patil Yatnal

ಹುಬ್ಬಳ್ಳಿ: ಯಾವುದೇ ಹೊಸ ಪೀಠ ಸ್ಥಾಪನೆ ಅಥವಾ ಮರುಸ್ಥಾಪನೆಯ ಉದ್ದೇಶ ಇಲ್ಲ. ಈಗಿರುವ ಮಠಗಳನ್ನು ಸುಧಾರಿಸುವುದೇ ನಮ್ಮ ಗುರಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಹರಿಹರ ಪೀಠದ ವಿವಾದ ಬಗೆಹರಿಸಲು ಎರಡೂ ಕಡೆಯವರನ್ನು ಸೇರಿಸಿ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.

ಟ್ರಸ್ಟ್ ಲೆಕ್ಕಪತ್ರ ಸೇರಿದಂತೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದು, ಸಮಾಜಕ್ಕೆ ಧಕ್ಕೆ ಉಂಟುಮಾಡುವ ಘಟನೆಗಳೂ ನಡೆದಿವೆ. ಈ ಹಿನ್ನೆಲೆಯಲ್ಲಿ ಎರಡೂ ಪಾಳಯಗಳ ನಡುವೆ ಸಮನ್ವಯ ಸಾಧಿಸಿ ಸಮಸ್ಯೆ ನಿವಾರಣೆ ಮಾಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

“ಶೇಕಡಾ 90ರಷ್ಟು ಸಮಸ್ಯೆ ಬಗೆಹರಿದಿದೆ. ಹರಿಹರ ಪೀಠದ ಜೊತೆಗೆ ಕೂಡಲಸಂಗಮ ಪೀಠದ ವಿವಾದವನ್ನೂ ಬಗೆಹರಿಸಲಾಗುವುದು” ಎಂದು ಯತ್ನಾಳ್ ಹೇಳಿದರು.

ಸಭೆಯ ಬಳಿಕ ಮಾತನಾಡಿದ ಅವರು, ಎರಡೂ ಕಡೆಯವರ ಮನಸ್ತಾಪ ನಿವಾರಿಸಲು ಪ್ರಯತ್ನ ಮುಂದುವರಿದಿದೆ. ಸಮಾಜದಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *