ಹೊಸ ಪಕ್ಷ ಕಟ್ಟಲು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಜ್ಜು!

0
Basanagouda Patil Yatnal

ವಿಜಯಪುರ: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿರುವ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ಬಲ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ಜನರು ಬೆಂಬಲಿಸಿದ್ದರೆ ಕರ್ನಾಟಕದಲ್ಲೇ ‘ಜೆಸಿಬಿ ಪಾರ್ಟಿ’ ರೆಡಿಯಾಗುತ್ತೆ! ಎಂದು ಯತ್ನಾಳ್ ಘೋಷಿಸಿದ್ದಾರೆ.

ತಮಿಳುನಾಡಿನಲ್ಲಿ ಎರಡು ವರ್ಷಗಳ ಹಿಂದೆ ಹುಟ್ಟಿದ ಪಕ್ಷವೇ ಈಗ ಅಧಿಕಾರಕ್ಕೆ ಬಂದಿದೆ ಎಂದು ಉದಾಹರಣೆ ನೀಡಿದ ಯತ್ನಾಳ್, “ನಾನೂ ಕೂಡಾ ರಾಜ್ಯದ ಸುತ್ತಾಟ ಆರಂಭಿಸುತ್ತಿದ್ದೇನೆ. ಜನರು ಒಪ್ಪಿದ್ರೆ ಜೆಸಿಬಿ ಪಾರ್ಟಿ ರೆಡಿ,” ಎಂದು ಹೇಳಿದ್ದಾರೆ. ಹೊಸ ಪಕ್ಷ ಘೋಷಣೆ ಯಾವಾಗ ಎಂಬ ಪ್ರಶ್ನೆಗೆ,
“ಮೊದಲ ಹಂತದಲ್ಲಿ ಪ್ರವಾಸ. ಮೊದಲು ಜನರ ಮಾತು ಕೇಳ್ತೀವಿ. ದೇಶಕ್ಕೆ ಮೋದಿ ಇದ್ದಂತೆ, ಕರ್ನಾಟಕಕ್ಕೆ ಜೆಸಿಬಿ ಬೇಕು” ಎಂದು ಯತ್ನಾಳ್ ಹೇಳಿದರು.

Leave a Reply

Your email address will not be published. Required fields are marked *