ಜಾತಿ ಸಮೀಕ್ಷೆಯನ್ನು ‘this is Too much, Useless’ ಎಂದ ಜೆಡಿಎಸ್

0
vidhanasoudha-300x194

ಬೆಂಗಳೂರು: ರಾಜ್ಯ ಸರ್ಕಾರದ ಜಾತಿ ಸಮೀಕ್ಷೆ ಬಗ್ಗೆ ಪ್ರತಿಪಕ್ಷ ಜೆಡಿಎಸ್ ಕಿಡಿಕಾರಿದೆ. ರಾಹುಲ್ ಗಾಂಧಿ ಮತ್ತು ತಂಡ “ಸಿದ್ಧ”ಪಡಿಸಿರುವ ಜಾತಿ ಗಣತಿ ಸಮೀಕ್ಷೆಯ ಮಾದರಿಗಳು, ಹಾಗೂ ಪ್ರಶ್ನೆಗಳು ಸರಿ ಇಲ್ಲ, this is Too much, Useless ಎಂದು ಸರಿಯಾದ ಮಾಹಿತಿಗಳನ್ನು ನೀಡದೆ ಡಿಸಿಎಂ ತಿರಸ್ಕರಿಸಿದ್ದಾರೆ ಎಂದು ಜೆಡಿಎಸ್ ಟೀಕಿಸಿದೆ.

ಸಮೀಕ್ಷೆಗೆ ಸಿದ್ದಪಡಿಸಿರುವ ಪ್ರಶ್ನಾವಳಿಗಳು ಯಾವುವು ? ಯಾವ ಪ್ರಶ್ನೆಗಳನ್ನು ಕೇಳಲಾಗುತ್ತಿದೆ ಎಂಬುದು ಸ್ವತಃ ಡಿಸಿಎಂಗೇ ಗೊತ್ತಿಲ್ಲ!! ಗಣತಿದಾರರು ಕೇಳುವ ಪ್ರಶ್ನೆಗಳಿಂದ ಡಿಸಿಎಂ ಅವರಿಗೆ ಇರಿಸು ಮುರಿಸು ಆಗಿದೆ. ಇನ್ನೂ ಜನಸಾಮಾನ್ಯರ ಪಾಡೇನು? ಎಂದು ಸಾಮಾಜಿಕ ಮಾಧ್ಯಮದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದೆ.

ಉದ್ದುದ್ದ, ಅಸಂಬದ್ದ, ಅನಗತ್ಯ ಪ್ರಶ್ನೆಗಳಿಗೆ ಉತ್ತರಿಸುವ ತಾಳ್ಮೆ ಹಾಗೂ ಸಮಯ ನಗರ ಪ್ರದೇಶಗಳ ಮಂದಿಗೆ ಇರುತ್ತದೆಯೇ? ಎಂದು ಪ್ರಶ್ನಿಸಿರುವ ಜೆಡಿಎಸ್, ಕೇಂದ್ರ ಸರ್ಕಾರ ಮುಂದಿನ ವರ್ಷ ಜನಗಣತಿ, ಜಾತಿಗಣತಿ ಮಾಡುವುದಾಗಿ ಪ್ರಕಟಿಸಿದ್ದರೂ ಹಠಕ್ಕೆ ಬಿದ್ದು ಸಿದ್ದರಾಮಯ್ಯ ಸರ್ಕಾರವು ರಾಜ್ಯದಲ್ಲಿ ಸಮೀಕ್ಷೆಯನ್ನು ತರಾತುರಿಯಲ್ಲಿ ಮಾಡುತ್ತಿರುವ ಹಿಂದಿನ ಒಳಸಂಚು ಏನು ? ಇದರಿಂದ ಯಾರಿಗೆ ಲಾಭ? ಎಂದು ಪ್ರಶ್ನಿಸಿದೆ.

Leave a Reply

Your email address will not be published. Required fields are marked *