ವಿಶ್ವಕಪ್ ಕ್ರಿಕೆಟ್ ಕ್ಲೈಮಾಕ್ಸ್; ಸರಣಿ ಶ್ರೇಷ್ಠರ ಪಟ್ಟಿಯಲ್ಲಿವೆ ಈ ಹೆಸರುಗಳು

World cup Cricket 2023 - Team India

ದೆಹಲಿ: 2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಕ್ಲೈಮಾಕ್ಸ್ ಘಟ್ಟದಲ್ಲಿದ್ದು ಮೋದಿ ಕ್ರೀಡಾಂಗಣದತ್ತ ಎಲ್ಲರ ಚಿತ್ತ ನೆಟ್ಟಿದೆ. ಅದಾಗಲೇ ಸರಣಿ ಶ್ರೇಷ್ಠರು ಯಾರಾಗುತ್ತಾರೆ ಎಂಬ ಕುತೂಹಲವೂ ಎಲ್ಲರನ್ನು ಕಾಡುತ್ತಿದೆ.

ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಮಧ್ಯೆ ಗುಜರಾತ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್‌ನ ಕೊನೆಯ ಪಂದ್ಯ ನಡೆಯಲಿದೆ. ಇದೇ ವೇಳೆ, ಸರಣಿ ಶ್ರೇಷ್ಠ ಪ್ರಶಸ್ತಿಗಾಗಿ 9 ಆಟಗಾರರನ್ನು ಐಸಿಸಿ ಪಟ್ಟಿ ಮಾಡಿದೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಆಸೀಸ್ ತಂಡದ ಆಡಮ್ ಝಂಪಾ, ಮ್ಯಾಕ್ಸ್ವೆಲ್ , ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ ಮತ್ತು ರಚಿನ್ ರವೀಂದ್ರ ಹೆಸರುಗಳು ಈ ಪಟ್ಟಿಯಲ್ಲಿ ಇದೆ ಎನ್ನಲಾಗುತ್ತಿದೆ.