ಟ್ರಂಪ್‌ಗೆ ಮತ್ತೊಂದು ಹಿನ್ನಡೆ: ಜನ್ಮಸಿದ್ಧ ಪೌರತ್ವ ನಿರ್ಬಂಧಕ್ಕೆ ಕೋರ್ಟ್ ತಡೆ

0
Donald-Trump-3-1

ವಾಷಿಂಗ್ಟನ್: ಅಮೆರಿಕದಲ್ಲಿ ಜನ್ಮಸಿದ್ಧ ಪೌರತ್ವದ ಹಕ್ಕನ್ನು ನಿರ್ಬಂಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮತ್ತೊಂದು ಪ್ರಯತ್ನಕ್ಕೆ ಫೆಡರಲ್ ನ್ಯಾಯಾಲಯ ತಡೆ ನೀಡಿದೆ. ಆಗಸ್ಟ್ 6ರಂದು ಹೊರಡಿಸಿದ್ದ ಕಾರ್ಯಕಾರಿ ಆದೇಶದ ಹೆಚ್ಚುವರಿ ನಿರ್ಬಂಧಗಳನ್ನು ವಾಷಿಂಗ್ಟನ್‌ನ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.

‘ನಾಥನ್ ವರ್ಸಸ್ ಟ್ರಂಪ್’ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದ್ದು, ಪರಿಣಾಮಿತ ಕುಟುಂಬಗಳ ಪರವಾಗಿ ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ (ACLU) ಅರ್ಜಿ ಸಲ್ಲಿಸಿತ್ತು. ಅಮೆರಿಕದಲ್ಲಿ ಜನಿಸಿದ ಮತ್ತು ದೇಶದ ಕಾನೂನುಗಳಿಗೆ ಒಳಪಡುವ ಮಕ್ಕಳಿಗೆ ಪೌರತ್ವ ನೀಡುವ ಸಾಂವಿಧಾನಿಕ ಹಕ್ಕಿನ ಮೇಲೆ ಅಧ್ಯಕ್ಷರು ಹೊಸ ವಿನಾಯಿತಿ ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಪೋಷಕರು ಅಮೆರಿಕದ ನಾಗರಿಕರಲ್ಲದ ಕೆಲವು ಮಕ್ಕಳಿಗೆ ಪೌರತ್ವ ನಿರಾಕರಿಸುವುದು, ವಿದೇಶಿ ಉದ್ಯೋಗಿಗಳ ಮಕ್ಕಳು ಹಾಗೂ ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಕ್ಕಳನ್ನು ನಿರ್ಬಂಧದ ವ್ಯಾಪ್ತಿಗೆ ತರುವುದು ಟ್ರಂಪ್ ಆದೇಶದ ಪ್ರಮುಖ ಅಂಶಗಳಾಗಿದ್ದವು.

ACLU ಸೇರಿದಂತೆ ಹಲವು ಸಂಘಟನೆಗಳು ಸೆಪ್ಟೆಂಬರ್ 28ರಂದು ಮೊಕದ್ದಮೆ ದಾಖಲಿಸಿದ್ದವು. ಇದಕ್ಕೂ ಮೊದಲು ಜೂನ್‌ನಲ್ಲಿ ಟ್ರಂಪ್ ಅವರ ಮೊದಲ ಪೌರತ್ವ ನಿರ್ಬಂಧ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದೀಗ ಹೊಸ ನಿರ್ಬಂಧಗಳಿಗೂ ತಡೆ ಬಿದ್ದಿರುವುದು ಟ್ರಂಪ್ ಆಡಳಿತಕ್ಕೆ ಮತ್ತೊಂದು ಹಿನ್ನಡೆಯಾಗಿದೆ.

Leave a Reply

Your email address will not be published. Required fields are marked *

You may have missed