ಉಡುಪಿ: ಚೇರ್ಕಾಡಿಯಲ್ಲಿ ಸಾಮರಸ್ಯ ಚಿಂತನ ಸಭೆ; ಮೂರು ಪುಸ್ತಕಗಳ ಬಿಡುಗಡೆ

0
Udupi-Samarasya-Chintana-Sabha-books-released

ಉಡುಪಿ: ಸಾಮರಸ್ಯ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಸಾಮರಸ್ಯ ಚಿಂತನ ಸಭೆ ಚೇರ್ಕಾಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪೂಜ್ಯ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಅದಮಾರು ಮಠದ ಈಶಪ್ರಿಯ ಸ್ವಾಮೀಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಸಾಮರಸ್ಯ ಗತಿವಿಧಿಯ ಅಖಿಲ ಭಾರತೀಯ ಸಂಯೋಜಕ ಶ್ಯಾಂ ಪ್ರಸಾದ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜನಮೇಜಯ ಉಮರ್ಜಿ ರಚಿಸಿದ ಕನ್ನಡದ ‘ಸಾಮರಸ್ಯದ ಅಣ್ಣ ಬಸವಣ್ಣ’ ಮತ್ತು ಹಿಂದಿಯ ‘ಸಮರಸತಾ ಕೇ ಭ್ರಾತಾ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಶ್ರೀ ಮಲಯಾಳಸ್ವಾಮಿ ಅವರ ‘ರಿಕ್ವಿಸಿಟ್ ಟು ಮೋಕ್ಷ – ಕಾಸ್ಟ್ ಓರ್ ಕ್ಯಾರೆಕ್ಟರ್’ ಎಂಬ ಇಂಗ್ಲಿಷ್ ಪುಸ್ತಕವೂ ಇದೇ ವೇಳೆ ಬಿಡುಗಡೆಯಾಯಿತು.

Leave a Reply

Your email address will not be published. Required fields are marked *