ಹಾಲ್ನೊರೆಯ ಝರಿ ತೊರೆಯಲ್ಲಿ ಅಪ್ಸರೆಯರು

0
udupi-arabbi falls

ನೀವು ಹೋಗಲೇಬೇಕಾದ, ನೀವು ನೋಡಲೇಬೇಕಾದ ರಮ್ಯರಮನೀಯ ಜಲ-ಝರಿ ಇದು. ಇದು ಅಪರೂಪದ ‘ಅರಬಿ ಜಲಧಾರೆ’..
ಉಡುಪಿಯ ಮಣಿಪಾಲದ ಮಣಿಪಾಲದ ದಶರಥನಗರದಲ್ಲಿ ವಿನೂತನ “ಅರಬಿ” ಜಲಪಾತ ಸೃಷ್ಟಿ.


ಸುಂದರ ಪ್ರಕೃತಿಮಾತೆಗೆ ಬೆಳ್ಳಿಯ ಜಡೆಯಂತಿರುವ ಈ ಜಲಪಾತ ಈ ಬಾರಿಯ ಮಳೆಗಾಲದ ಕೊಡುಗೆ. ಬೆಳ್ಳನೊರೆಯಂತಿರುವ ಈ ಜಲಪಾತ ವರ್ಷಪೂರ್ತಿಯೇನೂ ಇರುವುದಿಲ್ಲ. ಕೆಲ ದಿನಗಳ ಹಿಂದೆ ಸಣಕಲಾಗಿದ್ದ ಸಣ್ಣ ತೊರೆಗೆ ಜಲಪಾತದ ರೂಪು-ಚೆಲುವು ನೀಡಿದ್ದೇ ಮುಂಗಾರು.

ಕಳೆದೆರಡು ವಾರಗಳಿಂದ ಮೈದುಂಬಿಕೊಂಡಿರುವ ಜಲಪಾತವನ್ನು ನೋಡಲೆಂದೇ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ತುಂಬ ಮೇಲಿನಿಂದ ನೀರು ಬೀಳದೆ, ಭೂಮಿಯ ತುಸು ಮೇಲ್ಮಟ್ಟದಲ್ಲಿ ವಯ್ಯಾರದೊಂದಿಗೆ ಬಳುಕುತ್ತಾ ಕೆಳಗೆ ಹರಿಯುವ ಅರಬಿ ಜಲಪಾತಕ್ಕೆ ಗಿಡ-ಮರ-ಬಳ್ಳಿಗಳ ಸಾಂಗತ್ಯವೂ ದೊರಕಿರುವುದರಂದ ಇದರ ಸೌಂದರ್ಯ ಇಮ್ಮಡಿಗೊಂಡಿದೆ. ಮಣಿಪಾಲ ಯೂನಿವರ್ಸಿಟಿ ವಿದ್ಯಾರ್ಥಿಗಳ ದಂಡೇ ಈ ಜಲಪಾತದಲ್ಲಿ ಬೀಡು ಬಿಟ್ಟಿರುತ್ತದೆ.

  

Leave a Reply

Your email address will not be published. Required fields are marked *