ಉಗ್ರರನ್ನು ಪಾಕಿಸ್ತಾನವೇ ಪೋಷಿಸುತ್ತಿದೆ ; ಪರ್ವೇಜ್ ಮುಷರಫ್

0

ಉಗ್ರರನ್ನು ಪಾಕಿಸ್ತಾನವೇ ಪೋಷಿಸುತ್ತಿದೆ ಎಂಬುದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್  ಮುಷರಫ್ ಮಾತಿನಿಂದ ಇದೀಗ ಮತ್ತೆ ಜಗಜ್ಜಾಹೀರಾಗಿದೆ. ಈ ಬಗ್ಗೆ ಖಾಸಗಿ ವಾಹಿನಿ ಯೊಂದಕ್ಕೆ ಹೇಳಿಕೆಯನ್ನು ನೀಡಿರುವ ಮುಷರಫ್, ಕಾಶ್ಮೀರದಲ್ಲಿ ಹಿಂಸಾಚಾರ ಎಸಗಲು ಲಷ್ಕರ್ ತೊಯ್ಬಾ ದಂತಹ ಉಗ್ರಗಾಮಿ ಸಂಘಟನೆಗಳನ್ನು ಹುಟ್ಟಹಾಕಿದ್ದೇ ತಾವು ಎಂದು ಹೇಳಿದ್ದಾರೆ.

1990 ರಲ್ಲಿ ಕಾಶ್ಮೀರದ ಸ್ವಾತಂತ್ರ್ಯ ಹೋರಾಟಕ್ಕೆಂದು ಲಷ್ಕರ್ ತೊಯ್ಬಾನಂತಹ ಸಂಘಟನೆಗಳ ಸದಸ್ಯರಿಗೆ ತರಬೇತಿ ಮತ್ತು ಸಹಕಾರ ಕೊಟ್ಟೆವು. ಆಗ ಹಫೀಜ್ ಸಯೀದ್, ಝಾಕೀವುರ್ ಲಖ್ವಿ ನಮ್ಮ ಹಿರೋಗಳಾಗಿದ್ದರು. ಭಾರತಕ್ಕೆ ಶಿವಸೇನೆಯ ಬಾಳ್ ಠಾಕ್ರೆ ಹೇಗೋ ಹಾಗೇ ಹಫೀಜ್ ಸಯೀದ್ ನಮ್ಮ ಹೀರೋ ಎಂದು ಪರ್ವೇಜ್  ಮುಷರಫ್  ಪ್ರತಿಪಾದಿಸಿದ್ದಾರೆ.

ಭಾರತ ಹಾಗೂ ಆಪ್ಘಾನಿಸ್ತಾನದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸೆಗಲು ಪಾಕ್ ಸರ್ಕಾರವೇ ಉಗ್ರರಿಗೆ ತರಬೇತಿ ನೀಡಿ,ಆರ್ಥಿಕ ನೆರವುವನ್ನು ಒದಗಿಸುತ್ತದೆ ಎಂಬ ಸತ್ಯವನ್ನೂ ಮುಷರಫ್ ಬಹಿರಂಗಪಡಿಸಿದ್ದಾರೆ.

ಭಾರತ-ಆಪ್ಘಾನಿಸ್ತಾನದ ವಿರುದ್ದ ಉಗ್ರರನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದು ನಿಜ. ಹಾಗೇ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹಾಗೂ ಕಾಶ್ಮೀರದಲ್ಲಿ ಶಾಂತಿ ಕದಡಲು ಉಗ್ರರಿಗೆ ಪ್ರೇರಣೆ ನೀಡಿದ್ದಾಗಿಯೂ ಪರ್ವೇಜ್  ಮುಷರಫ್ ಒಪ್ಪಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed