ಯಕ್ಷಗಾನ ರೂಪಕದಲ್ಲಿ ‘ಶ್ರೀ ರಾಘವೇಂದ್ರ ಮಹಿಮೆ’; ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಸಾಧಕರಿಗೆ ಪುರಸ್ಕಾರ

0
Govinda-babu-Pujari-Justice-sreeshananda-300x217-1

ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಸ್ಪಂದನಾ ಸೇವಾ ಸಮಿತಿ ವತಿಯಿಂದ ನಂದ್ರೊಳ್ಳಿ ಸೀತಾರಾಮಶೆಟ್ಟಿ ವಿರಚಿತ ಶ್ರೀ ರಾಘವೇಂದ್ರ ಮಹಿಮೆ ಯಕ್ಷಗಾನ ಕಾರ್ಯಕ್ರಮ ಗಮನಸೆಳೆಯಿತು.

ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀಶಾನಂದ, ರಾಜೇಶ್ ರೈ, ಮಂತ್ರಾಲಯ ಮಠ ಪ್ರತಿನಿಧಿ ಎಸ್.ಎನ್.ವೆಂಕಟೇಶಾಚಾರ್ಯ, ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಉದ್ಯಮಿ ರಾಜೇಶ್ ಶೆಟ್ಟಿ, ಹೋಟೆಲ್ ಮತ್ತು ಬೇಕರಿ, ಕಾಂಡಿಮೆಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರತಾಪ್ ಶೆಟ್ಟಿ, ಪ್ರಭು, ಕರುಣಕರ್ ಶೆಟ್ಟಿ ಸ್ಪಂದನಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ವೆಂಕಟೇಶ್ ಪೈ ರವರು ದೀಪ ಬೆಳಗಿಸಿ ಉದ್ಘಾಟಸಿ, ಯಕ್ಷಗಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನ್ಯಾಯಮೂರ್ತಿ ಶ್ರೀಶಾನಂದರವರು ಮಾತನಾಡಿ, ಅಂದಿನ ಕಾಲದಲ್ಲಿ ಭಾಗವತರ ಕಥೆಯಲ್ಲಿ ರೋಗ ವಾಸಿ ಮಾಡುವ ತಂತ್ರಗಳು ಇರುತ್ತಿತು. ಒಳ್ಳೆಯವರನ್ನ ರಕ್ಷಣೆಬೇಕಾದದ್ದು ದೇವರ ಕೆಲಸ, ಭಕ್ತರ ಮಾತನ್ನ ಸುಳ್ಳು ಮಾಡಬಾರದು ಎಂಬ ನಂಬಿಕೆ. ಪ್ರಹ್ಲಾದ ಮಾತು ಮೀರಬಾರದು ಎಂದು ಹಿರಣ್ಯಕಶಿಪು ಸಂಹಾರ ಮಾಡಿದರು ನರಸಿಂಹ ದೇವರು. ಎಷ್ಟೆ ಕಷ್ಟ ಬಂದರು ನರಸಿಂಹ ದೇವರ ಮೊರೆ ಹೋಗಬೇಕು. ಪುಣ್ಯ ಮತ್ತು ಪಾಪಗಳು ಬೇರೆ. 10ಲಕ್ಷ ಹಣ ಪಾಪದಿಂದ ಗಳಿಸಿ, 1 ಲಕ್ಷ ದಾನ ಮಾಡಿದರೆ ಪುಣ್ಯ ಬರುವುದಿಲ್ಲ ಎಂದರು.

ವ್ಯಾಸರಾಯರು , ವ್ಯಾಸರಾಜರಾಗಿ ಮುಂದಿನ ಅವತಾರದಲ್ಲಿ ಶ್ರೀ ಗುರುರಾಘವೇಂದ್ರರಾಗಿ ಜನಿಸುತ್ತಾರೆ. ಮಂಚಾಲೆ ಅಂತಹ ಕಾಡಿನಲ್ಲಿ ಇದ್ದರು ಭಕ್ತರು ಬಿಡಲ್ಲಿಲ, ಮುಸ್ಲಿಂರು ಸಹ ನಂಬುತ್ತಾರೆ ರಾಯರನ್ನ, ಥಾಮಸ್ ಮೆನ್ರೂರವರು ಅಪಾರ ಭಕ್ತರಾಗಿದ್ದರು ಎಂದು ಸ್ಮರಿಸಿದ ಶ್ರೀಶಾನಂದ, ಸಕಲ ಸಂಕಷ್ಟಗಳ ನಿವಾರಣೆ ಮಾಡಲು ಗುರುಗಳಾದ ರಾಯರಿದ್ದಾರೆ. ಏಕಾದಶಿ ದಿನ ಮಾಡುವ ಒಳ್ಳೆಯ ಕೆಲಸಕ್ಕೆ ಪುಣ್ಯಪ್ತಾಪ್ತಿಯಾಗುತ್ತದೆ. ಯಾರಿಗೆ ಗಾಡ್ ಫಾದರ್ ಇಲ್ಲ ಬೇಸರ ಮಾಡಿಕೊಳ್ಳಬಾರದು, ಗಾಡ್ ನಮ್ಮ ಫಾದರ್ ಎಂದರು.

ಇದೇ ವೇಳೆ, ಸಮಾಜಮುಖಿ ಸೇವೆ ಮಾಡಿದ ಗಣ್ಯರ ಸಾಧನೆಯನ್ನು ಗೌರವಿಸಿ ಪ್ರಶಸ್ತಿಗಳನ್ನು ನೀಡಲಾಯಿತು. ನಿರ್ಗತಿಕರಿಗೆ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಹಾಗೂ ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿರುವ ಖ್ಯಾತಿಗೆ ಪಾತ್ರರಾಗಿರುವ ಸಾಮಾಜಿಕ ಕಾರ್ಯಕರ್ತ, ಚೆಫ್ ಟಾಕ್ ಸಂಸ್ಥೆಯ ಮಾಲೀಕ ಗೋವಿಂದ ಬಾಬು ಪೂಜಾರಿ ಸಹಿತ ಹಲವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದವರ ವಿವರ ಹೀಗಿದೆ:

ಸಾಮಾಜಿಕ ಸೇವಾ ಸ್ಪಂದನಾ ಪ್ರಶಸ್ತಿ:

  • ಗೋವಿಂದ ಬಾಬು ಪೂಜಾರಿ, ಚೆಫ್ ಟಾಕ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು.
  • ಕೆ.ವೆಂಕಟೇಶ್, ಪೊಲೀಸ್ ಇನ್ಸ್ ಪೆಕ್ಟರ್.

ಯಕ್ಷಕಲಾ ಸೇವಾ ಸ್ಪಂದನಾ ಪ್ರಶಸ್ತಿ:

  • ವಿಜಯ ಗಾಣಿಗ ಜೀಜಮಕ್ಕಿ, ಯಕ್ಷಗಾನ ಸ್ತ್ರೀ ವೇಷಧಾರಿಗಳು.
  • ಶ್ರೀಮತಿ ಅರ್ಪಿತಾ ಹೊಳ್ಳ, ಯಕ್ಷಗಾನ ಸೇವೆ.

Leave a Reply

Your email address will not be published. Required fields are marked *