ವಿವಾದದ ಬಿರುಗಾಳಿ ಎಬ್ಬಿಸಿದ ಸಿದ್ದರಾಮಯ್ಯ ಹೇಳಿಕೆ: ಭಾರತ ಬಗ್ಗೆ ಪಾಕ್ ಗೇಲಿ

0
Siddaramaiah in pak media- Pahalgam Attack

ಬೆಂಗಳೂರು: ಪಹಲ್ಗಾಮ್ ದಾಳಿ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿವಾದದ ಬಿರುಗಾಳಿ ಎಬ್ಬಿಸಿದೆ. ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಯನ್ನು ಮುಂದಿಟ್ಟು ಪಾಕಿಸ್ತಾನದ ಸುದ್ದಿವಾಹಿನಿಗಳು ಭಾರತ ಬಗ್ಗೆ ಗೇಲಿ ಮಾಡಲಾರಂಭಿಸಿದೆ.

ಪಾಕಿಸ್ತಾನದ ವಿರುದ್ಧ ಮೋದಿ ಸರ್ಕಾರ ರಾಜತಾಂತ್ರಿಕ ನಿರ್ಬಂಧಗಳನ್ನು ಹೇರಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಪ್ರಸ್ತುತ ಪಾಕಿಸ್ತಾನದ ಜೊತೆಗೆ ಯುದ್ಧದ ಅನಿವಾರ್ಯತೆ ಎದುರಾಗಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಬಗೆ ಬಗೆಯಲ್ಲಿ ವಿಶ್ಲೇಷಿಸಿರುವ ಪಾಕಿಸ್ತಾನದ ಸುದ್ದಿ ವಾಹಿನಿಗಳು, ಪಾಕಿಸ್ತಾನ ವಿರುದ್ದದ ವಿಚಾರದಲ್ಲಿ ಭಾರತದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ ಎಂದು ಬಣ್ಣಿಸಿವೆ. ಈ ಬೆಳೆವಣಿಗೆ ಬಗ್ಗೆ ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.

ಪಾಕಿಸ್ತಾನದ ಮಾಧ್ಯಮ ಸುದ್ದಿಯ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ, ‘ಪಾಕಿಸ್ತಾನದ ರಕ್ಷಣೆಗೆ ಕಾಂಗ್ರೆಸ್ ಧಾವಿಸುತ್ತದೆ. ಮುಸ್ಲಿಂ ಮತಗಳಿಂದ ತಮ್ಮ ಸ್ಥಾನವನ್ನು ಅಲಂಕರಿಸಿಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಾಕಿಸ್ತಾನ ಭಾರತೀಯ ಹಿಂದೂಗಳನ್ನು ನಿರ್ದಯವಾಗಿ ಹತ್ಯೆ ಮಾಡುತ್ತಿದ್ದರೂ, ಕಾಶ್ಮೀರದಲ್ಲಿ ಭದ್ರತಾ ಕ್ರಮಗಳತ್ತ ಗಮನಹರಿಸಬೇಕೆಂದು ಪಾಕಿಸ್ತಾನದಾದ್ಯಂತ ಹೇಳಲಾಗುತ್ತಿದೆ’ ಹೇಳುತ್ತಿದೆ ಎಂದು ವಿಶ್ಲೇಷಿಸಿದ್ದಾರೆ.

Leave a Reply

Your email address will not be published. Required fields are marked *