NEET, JEE, CET ಯಶೋಗಾಥೆ; ಚಿಕ್ಕೋಡಿಯಲ್ಲಿ ವೇದಾಂತ PU ಕಾಲೇಜು ಸ್ಕಾಲರ್ಶಿಪ್ ಪರೀಕ್ಷೆ

ಮಂಗಳೂರು: ಉನ್ನತ ಹಾಗೂ ವೈದ್ಯಕೀಯ ಶಿಕ್ಷಣ ಪ್ರವೇಶ ಸಂಬಂಧ ತರಬೇತಿಯಲ್ಲಿ ಯಶೋಗಾಥೆ ಬರೆದಿರುವ ಮಂಗಳೂರಿನ ‘ವೈವಿಧ್ಯ’ ಸಂಸ್ಥೆಯ ಸಹಭಾಗಿತ್ವದ ‘ವೇದಾಂತ ಪದವಿ ಪೂರ್ವ ಕಾಲೇಜು’ ಸ್ಕಾಲರ್ಶಿಪ್ ಸಂಬಂಧ ನಡೆಸುತ್ತಿರುವ ಪ್ರವೇಶ ಪರೀಕ್ಷೆ ಜನಪ್ರಿಯವಾಗುತ್ತಿದೆ.
ಮಂಗಳೂರಿನ ನೀರುಮಾರ್ಗ ಸಮೀಪದ ಫರ್ಮಾಯಿ ಚರ್ಚ್ ಸಮೀಪ ಇರುವ ವೇದಾಂತ ಪದವಿ ಪೂರ್ವ ಕಾಲೇಜು’ NEET, JEE, CET ಸಹಿತ ಸ್ಪರ್ಧಾತ್ಮಕ ಪರೀಕ್ಷೆಯ ಶಿಕ್ಷಣ ನೀಡುತ್ತಿದೆ. ಹಾಗಾಗಿ ಪ್ರವೇಶಕ್ಕಾಗಿ ಬೇಡಿಕೆ ಹೆಚ್ಚಾಗಿದೆ. ಇದರ ಜೊತೆಯಲ್ಲೇ, ವಿದ್ಯಾರ್ಥಿ ವೇತನ ಸಹಿತ ಉಚಿತ ಪ್ರವೇಶವನ್ನು ಕೂಡಾ ಶಿಕ್ಷಣ ಸಂಸ್ಥೆ ಕಲ್ಪಿಸುತ್ತದೆ. ಇದಕ್ಕಾಗಿ ರಾಜ್ಯದ ಹಲವೆಡೆ ಪರೀಕ್ಷೆ ನಡೆಸಲಾಗುತ್ತಿದೆ.
ಕಳೆದ ವಾರಾಂತ್ಯ ದಿನವಾದ ಭಾನುವಾರ (21 ಸೆಪ್ಟೆಂಬರ್, 2025) ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ನಡೆದ ‘ಉಚಿತ ವೇದಾಂತ ವಿದ್ಯಾರ್ಥಿವೇತನ ಪರೀಕ್ಷೆ’ಯಲ್ಲಿ ದಾಖಲೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಚಿಕ್ಕೋಡಿಯ GSES English Medium School ನಲ್ಲಿ ನಡೆದ ಪರೀಕ್ಷೆಯಲ್ಲಿ ಬೆಳಗಾವಿ ಸುತ್ತಮುತ್ತಲ ಜಿಲ್ಲೆಗಳ 92 ಶಾಲೆಗಳ 261 ಮಕ್ಕಳು ಅಂತಿಮ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಕೆ.ಎಲ್.ಇ ಶಾಲೆ, ನಿಪ್ಪಾಣಿ ಯ ತನು ಬಾಲಿಗಾರ್ ಪ್ರಥಮ ಸ್ಥಾನವನ್ನು ಗಳಿಸಿದ್ದು ಅವರಿಗೆ ಮಂಗಳೂರಿನ ವೇದಾಂತ ಪದವಿಪೂರ್ವ ಕಾಲೇಜಿನಲ್ಲಿ ಉಚಿತ ಸೀಟು ಕಲ್ಪಿಸಲಾಗಿದೆ. ಹಾಗೂ ಇತರ 30 ಮಕ್ಕಳಿಗೆ ವಿದ್ಯಾರ್ಥಿ ವೇತನ ಘೋಷಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ನಿರ್ದೇಶಕ ರಾಮನಾಥ್ ತಿಳಿಸಿದ್ದಾರೆ.
IITIANS ಮತ್ತು Doctors ನಡೆಸುತ್ತಿರುವ ಮೊದಲ ಪಿಯು ಕಾಲೇಜು ಎಂಬ ಖ್ಯಾತಿ ಪಡೆದ ವೇದಾಂತ ಪಿಯು ಕಾಲೇಜು ಮತ್ತಷ್ಟು ಕಡೆ ಉಚಿತ ವಿದ್ಯಾರ್ಥಿವೇತನ ಪರೀಕ್ಷೆ ಆಯೋಜಿಸಿದೆ ಎಂದು ಅವರು ತಿಳಿಸಿದ್ದಾರೆ.
ಮುಂಬರುವ ಪರೀಕ್ಷಾ ವೇಳಾಪಟ್ಟಿ ಮತ್ತು ಪರೀಕ್ಷಾ ಕೇಂದ್ರ:
ಮಂಗಳೂರಿನಲ್ಲಿ IITIANS ಮತ್ತು Doctors ನಡೆಸುತ್ತಿರುವ ‘ವೇದಾಂತ ಪದವಿಪೂರ್ವ ಕಾಲೇಜ್’ ಉಚಿತ ವಿದ್ಯಾರ್ಥಿವೇತನ ಮೂಲಕ ಪ್ರವೇಶಕ್ಕಾಗಿ State/CBSE/ICSE 10ನೆೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ಮಂಗಳೂರು, ಬಳ್ಳಾರಿ, ಹೊಸಪೇಟೆ, ಕೋಲಾರ ನಗರಗಳ ವಿವಿಧ ಕಾಲೇಜುಗಳಲ್ಲೂ ಬೆಳಿಗ್ಗೆ 10ಗಂಟೆಯಿಂದ 11 ಗಂಟೆವರೆಗೆ ಈ ಪ್ರವೇಶ ಪರೀಕ್ಷೆ ನಡೆಯಲಿದೆ.
05.10.2025 (Sunday): Mangalore Vedanta P U College, Cutinhopadavu, Fermai, Mangalore – 575029
12.10.2025 (Sunday): Bellary Ex municipal high school Sangam circle, Dr. Rajkumar road, Bellary-583101
12.10.2025 (Sunday): Hospet KSPL P U college Basaveshwara badavane, Behind Hero Honda showroom Hospet 583201
19.10.2025 (Sunday): Kolar Sri Channegowda Group of institutions, NH75 bypass, Near Railway gate, Kogilahalli, Kolar– 563101
ಪ್ರವೇಶ ಪರೀಕ್ಷೆ ಸಂಬಂಧ ಹೆಚ್ಚಿನ ಮಾಹಿತಿಯನ್ನು ಶಿಕ್ಷಣ ಸಂಸ್ಥೆಯ ವೆಬ್ಸೈಟ್ https://vedantapucollege.com/scholarship-test/ ನಲ್ಲಿ ಲಭ್ಯವಿದ್ದು, ಅದರಲ್ಲೇ ಅರ್ಜಿ ಸಲಿಸಬಹುದು ಎಂದು ನಿರ್ದೇಶಕರು ತಿಳಿಸಿದ್ದಾರೆ

