;ಪುಷ್ಪಕ ವಿಮಾನ’ ಖ್ಯಾತಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ವಿಧಿವಶ

0
Director-Singeetam-Srinivasa-Rao

ಬೆಂಗಳೂರು: ಖ್ಯಾತ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ (95) ನಿಧನ ಹೊಂದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ರಾತ್ರಿ 10.30ಕ್ಕೆ ಕೊನೆಯುಸಿರೆಳೆದಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿ ಹಿಂದಿ ಭಾಷೆಯಲ್ಲಿಯೂ ಅವರು ಸಿನಿಮಾ ನಿರ್ದೇಶಿಸಿದ್ದರು. 60ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದ ಸಿಂಗೀತಂ ಶ್ರೀನಿವಾಸ ರಾವ್, 2 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 3 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ನಂದಿ ಪ್ರಶಸ್ತಿ ಮತ್ತು ಫಿಲ್ಮ್​ಫೇರ್ ಪ್ರಶಸ್ತಿಗೆ ಭಾಜನರಾಗಿದ್ದರು.

1931ರ ಸೆಪ್ಟೆಂಬರ್ 21ರಂದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯಲ್ಲಿ ಜನಿಸಿದ್ದ ಇವರು ಯಶಸ್ವೀ ನಿರ್ದೇಶಕರಾಗಿದ್ದರು. ಡಾ.ರಾಜ್​ಕುಮಾರ್ ಅವರ ಹಲವು ಸಿನಿಮಾ ನಿರ್ದೇಶಿಸಿದ್ದರು. ಶ್ರಾವಣ ಬಂತು ಚಲಿಸುವ ಮೋಡಗಳು, ಹಾಲು ಜೇನು, ಶ್ರುತಿ ಸೇರಿದಾಗ, ಭಾಗ್ಯದ ಲಕ್ಷ್ಮೀ ಬಾರಮ್ಮ, 2 ನಕ್ಷತ್ರಗಳು, ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. ‘ಆನಂದ್’ ಸಿನಿಮಾ ಮೂಲಕ ಶಿವರಾಜ್​ಕುಮಾರ್​ರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇ ಇವರು. ಮೂಖಿ, ಪುಷ್ಕಕ ವಿಮಾನ, ಆದಿತ್ಯ 369, ಬೈರವ ದ್ವೀಪಮ್ ಸಹಿತ ಪ್ರಮುಖ ಸಿನಿಮಾಗಳನ್ನು ನಿರ್ಮಿಸಿರುವ ಇವರು ತಮ್ಮ 95ನೇ ವಯಸಿನಲ್ಲೂ ಗೀತo ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು.

Leave a Reply

Your email address will not be published. Required fields are marked *