ಸ್ಯಾಂಡಲ್ ವುಡ್ ನ ಡೈನಾಮಿಕ್ ಹಿರೋ ಅದ್ದೂರಿ ವಿವಾಹ

ಸ್ಯಾಂಡಲ್ ವುಡ್ ನ ಡೈನಾಮಿಕ್ ಹಿರೋ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಹಾಗೂ ಮಾಡೆಲ್ ಕಂ ನೃತ್ಯಗಾರ್ತಿ ರಾಗಿಣಿ ಚಂದ್ರನ್ ಅವರ ವಿವಾಹ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು. ಒಕ್ಕಲಿಗ ಮತ್ತು ಐಯ್ಯರ್ ಸಂಪ್ರದಾಯದಂತೆ ನಡೆದ ವಿವಾಹ ಮಹೋತ್ಸವಕ್ಕೆ ನೂರಾರು ಮಂದಿ ಸಾಕ್ಷಿಯಾದರು.
ಸಿಕ್ಸರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಪ್ರಜ್ವಲ್ ದೇವರಾಜ್ ಈವರೆಗೆ 25 ಚಿತ್ರಗಳಲ್ಲಿ ಅಬಿನಯಿಸಿ ಹೆಸರು ಮಾಡಿದ್ದಾರೆ. ಇನ್ನು ರಾಗಿಣಿ ಚಂದ್ರನ್ ಉತ್ತಮ ನೃತ್ಯಗಾರ್ತಿಯಾಗಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಜ್ವಲ್ ದೇವರಾಜ್ ಹಾಗೂ ರಾಗಿಣಿ ಚಂದ್ರನ್ ಬಾಲ್ಯ ಸ್ನೇಹಿತರಾಗಿದ್ದು, ಇದೀಗ ಲವ್ ಕಂ ಆರೇಂಜ್ ಮ್ಯಾರೇಜ್ ಮೂಲಕ ಸತಿಪತಿಗಳಾಗಿದ್ದಾರೆ.
ನಟ ರಾಘವೇಂದ್ರ ರಾಜ್ ಕುಮಾರ್, ನಟಿ ಭಾರತಿ ವಿಷ್ಣುವರ್ಧನ್, ನಟರಾದ ಅನಿರುದ್ಧ, ಗೋಲ್ಡನ್ ಸ್ಟಾರ್ ಗಣೇಶ್, ಲವ್ಲಿ ಸ್ಟಾರ್ ಪ್ರೇಮ್, ಚಿರಂಜೀವಿ ಸರ್ಜಾ, ಅವಿನಾಶ್ ಹಿರಿಯ ನಟ ಲೋಕನಾಥ್, ನಟಿ ಮಾಳವಿಕ, ಮಾಜಿ ಸಚಿವ ಬಚ್ಚೇಗೌಡ ಸೇರಿದಂತೆ ಹಲವರು ವಿವಾಹದಲ್ಲಿ ಭಾಗಿಯಾಗಿ ವಧುವರರಿಗೆ ಶುಭಕೋರಿದರು.