ಬೆಂಗಳೂರು ವಿವಿ ಸಂವಹನ ವಿಭಾಗದ ವಿನೋದ್ ಕುಮಾರ್ ಡಿ ಚವಾಣ್’ಗೆ ಡಾಕ್ಟರೇಟ್ (PhD) ಪದವಿ

0
Vinod Kumar D Chavan -PhD -Bengaluru University

ಬೆಂಗಳೂರು: ಬೆಂಗಳೂರು ವಿವಿ ಸಂವಹನ ವಿಭಾಗದ ವಿನೋದ್ ಕುಮಾರ್ ಡಿ ಚವಾಣ್’ಗೆ ಡಾಕ್ಟರೇಟ್ (PhD) ಪದವಿ ಪ್ರದಾನ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ರಾಮತೀರ್ಥ ತಾಂಡದ ದಾಮಾಜಿ ಮಾನ್ಸಿಂಗ್ ಚವಾಣ್ ಮತ್ತು ವೀಣಾ ಚವಾಣ್ ದಂಪತಿಯ ಪುತ್ರ ವಿನೋದ್ ಕುಮಾರ್ ಡಿ ಚವಾಣ್ ನಡೆಸಿದ ಸಂಶೋಧನೆಗೆ ಬೆಂಗಳೂರು ವಿಶ್ವವಿದ್ಯಾಲಯ PhD ಪದವಿ ನೀಡಿದೆ.

ಸಂವಹನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಎನ್. ಸಂಜೀವ್ ರಾಜ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಸೋಶಿಯಲ್ ಮೀಡಿಯಾ ಇಂಟರ್ವೆನ್ಶನ್ ಫಾರ್ ಪಾರ್ಟಿಸಿಪೇಟರಿ ಸ್ಪೋರ್ಟ್ಸ್ ಮ್ಯಾನೇಜ್ ಮೆಂಟ್ ಇನ್ ಕರ್ನಾಟಕ ಸ್ಟೇಟ್: ಎ ಕಂಪರೇಟಿವ್ ಸ್ಟಡಿ ಆಫ್ ಫೇಸ್‌ಬುಕ್ ಅಂಡ್ ಯೂಟ್ಯೂಬ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ವಿನೋದ್ ಕುಮಾರ್ ಡಿ ಚವಾಣ್ ರವರನ್ನು ಶೈಕ್ಷಣಿಕ ಸಾಧನೆಗಾಗಿ ಶಿಕ್ಷಣ ತಜ್ಞರು ಅಭಿನಂಧಿಸಿದ್ದಾರೆ.

Leave a Reply

Your email address will not be published. Required fields are marked *