ಬೆಂಗಳೂರು ವಿವಿ ಸಂವಹನ ವಿಭಾಗದ ಸಂಶೋಧನಾರ್ಥಿ ಬಿ.ಹರಿಣಿಗೆ ಡಾಕ್ಟರೇಟ್ (PhD)

0
Harini B PhD- Bengaluru university

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಸಂಶೋಧನಾರ್ಥಿ ಹರಿಣಿ ಬಿ. ರವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಮೈಸೂರಿನ ಭಾರತೀಯ ರೈಲ್ವೆ ಲೋಕೋ ಪೈಲಟ್ (ನಿವೃತ್ತ) ಬಿ.ಎಸ್. ಬಾಲಕೃಷ್ಣ ನಾಯ್ಡು ಮತ್ತು ಕೆ.ಜಿ. ಲಕ್ಷ್ಮೀದೇವಿ ದಂಪತಿಯ ಪುತ್ರಿ ಹರಿಣಿ ಬಿ. ಅವರು ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ವಿಭಾಗದ (ಐಸಿಎಸ್ಎಸ್ಆರ್ ಡಾಕ್ಟರಲ್ ಫೆಲೋ) ಸಂಶೋಧನಾರ್ಥಿಯಾಗಿದ್ದರು.

ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎನ್. ಸಂಜೀವ್ ರಾಜ್ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಹೆಲ್ತ್ ಕಮ್ಯುನಿಕೇಷನ್ ಸ್ಟ್ರಾಟಜಿಸ್ ಫಾರ್ ದ ಆಡೋಪ್ಶನ್ ಆಫ್ ಹೆಲ್ತ್ ಇನ್ನೋವೆಷನ್ಸ್ ಅಂಡ್ ಬಿಹೇವಿಯರಲ್ ಪ್ಯಾಟ್ರನ್ಸ್: ಅನ್ ಅನಾಲಿಟಿಕಲ್ ಸ್ಟಡಿ ವಿಥ್ ರಿಫೆರೆನ್ಸ್ ಟು ಕರ್ನಾಟಕ ಸ್ಟೇಟ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ವೇಳೆ, ಕಠಿಣ ಪರಿಶ್ರಮ, ಶೈಕ್ಷಣಿಕ ಸಾಧನೆಗಾಗಿ ಕುಟುಂಬಸ್ಥರು, ಹಾಗೂ ಗಣ್ಯರು ಬಿ.ಹರಿಣಿ ಅವರನ್ನು ಅಭಿನಂಧಿಸಿದ್ದಾರೆ.

Leave a Reply

Your email address will not be published. Required fields are marked *