KSRTCಯತ್ತ ಪ್ರಶಸ್ತಿಗಳ ಮೆರವಣಿಗೆ; ಮತ್ತೊಮ್ಮೆ 10ಕ್ಕೂ ಹೆಚ್ಚು ಪುರಸ್ಕಾರಗಳು

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
(KSRTC) ರಾಷ್ಟ್ರೀಯ ಮಟ್ಟದ 8 ವೀಡಿಯಾ – ViDEA, 5 ಎಮ್ಕ್ಯೂಬ್ – mCUBE ಮತ್ತು 2 ಸ್ಕಾಚ್ ಆರ್ಡರ್ ಆಫ್ ಮೆರಿಟ್ ಮತ್ತು 1 ಸ್ಕಾಚ್ ಪ್ರಶಸ್ತಿಗಳನ್ನು ಪಡೆದು ಗಮನಸೆಳೆದಿದೆ.

ವೀಡಿಯಾ ಪ್ರಶಸ್ತಿಗಳು: 

  1. ಪಲ್ಲಕ್ಕಿ ಬ್ರಾಂಡಿಂಗ್‌ಗಾಗಿ ಪ್ರಾಡಕ್ಟ್ ಪ್ಲೇಸ್ಮೆಂಟ್ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.

  2. ಅಶ್ವಮೇಧ ಬ್ರಾಂಡಿಂಗ್ ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್ಲೈನ್) ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.

  3. ಶಕ್ತಿ ಯೋಜನೆಗೆ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಪಾರಂಪರಿಕ ಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.

  4. ಅಶ್ವಮೇಧ ಬ್ರಾಂಡಿಂಗ್ ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಬಹುಮಾಧ್ಯಮ ಪ್ರಚಾರಕ್ಕಾಗಿ ಅತ್ಯುತ್ತಮ ವೀಡಿಯೊ ಕಂಟೆಂಟ್.

  5. ಪಲ್ಲಕ್ಕಿ ಬ್ರಾಂಡಿಂಗ್ ಗಾಗಿ ಪ್ರವಾಸ ಮತ್ತು ಪ್ರಯಾಣ ಸಂಸ್ಥೆಯಿಂದ ಡಿಜಿಟಲ್ ಕ್ಯಾಂಪೇನ್ ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.

  6. ಅಂಬಾರಿ ಉತ್ಸವದ ಬ್ರಾಂಡಿಂಗ್ ಗಾಗಿ ಇನ್ಸ್ಟಾಗ್ರಾಮ್ ಕ್ಯಾಂಪೇನ್ನಲ್ಲಿ ಅತ್ಯುತ್ತಮ ವೀಡಿಯೊ ಕಂಟೆಂಟ್.

  7. ಅಶ್ವಮೇಧ ಬ್ರಾಂಡಿಂಗ್ ಗಾಗಿ ಮೊಬೈಲ್ ಮಾರ್ಕೆಟಿಂಗ್ ಕ್ಯಾಂಪೇನ್ – ಒಟ್ಟಾರೆ ಅತ್ಯುತ್ತಮ ವೀಡಿಯೊ ಕಂಟೆಂಟ್.

  8. ಶ್ರೇಷ್ಠ ವೀಡಿಯೊ ಕಂಟೆಂಟ್ ಬ್ರಾಂಡ್ಸ್ ಎಂಟರ್ಪ್ರೈಸ್ -ಕೆಎಸ್‌ಆರ್‌ಟಿಸಿ.

ಎಮ್ಕ್ಯೂಬ್ ಪ್ರಶಸ್ತಿಗಳು:

  1. ಬ್ರಾಂಡಿಂಗ್ ಗಾಗಿ ಶ್ರೇಷ್ಠ ಪಿಆರ್ ಕ್ಯಾಂಪೇನ್.

  2. ಬ್ರಾಂಡಿಂಗ್ ಗಾಗಿ ಕಡಿಮೆ ಬಜೆಟ್ ಮಾರ್ಕೆಟಿಂಗ್ ಕ್ಯಾಂಪೇನ್ (ಆಫ್ಲೈನ್).

  3. ಪ್ರವಾಸ ಮತ್ತು ಪ್ರಯಾಣದ ಶ್ರೇಷ್ಠ ಎಟಿಎಲ್ ಕ್ಯಾಂಪೇನ್.

  4. ಶಕ್ತಿ ಯೋಜನೆಗಾಗಿ ಶ್ರೇಷ್ಠ ಬ್ರಾಂಡ್ ಕಂಟೆಂಟ್.

  5. ಬ್ರಾಂಡಿಂಗ್ ಗಾಗಿ ಶ್ರೇಷ್ಠ ಆನ್ಲೈನ್ ಪಿಆರ್ ಕ್ಯಾಂಪೇನ್.

ViDEA ಪ್ರಶಸ್ತಿ ಮತ್ತು mCUBE ಪ್ರಶಸ್ತಿಗಳನ್ನು ಗುರುಗಾಂವ್ ನಲ್ಲಿ, ಪ್ರದಾನ ಮಾಡಲಾಯಿತು. ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಆನ್ ಲೈನ್ ನಲ್ಲಿ ಪ್ರದಾನ ಮಾಡಲಾಯಿತು.

ಇದೇ ವೇಳೆ, ನಿಗಮವು ಸಾರಿಗೆ ಸಂಜೀವಿನಿ- ನೌಕರರ ಹೃದಯ ರೋಗ ತಪಾಸಣೆಗಾಗಿ ಮತ್ತು ರಸ್ತೆ ಸುರಕ್ಷತೆ ಉಪಕ್ರಮಗಳಿಗಾಗಿ 2 ಸ್ಕೋಚ್ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಗಳನ್ನು ಮತ್ತು 1 ಸ್ಕೋಚ್ ಪ್ರಶಸ್ತಿಯನ್ನು ಪಡೆದಿದೆ..

ಸ್ಕೋಚ್ ಪ್ರಶಸ್ತಿ ಸಮಾರಂಭವು ಸೆಪ್ಟೆಂಬರ್ 21ರಂದು ನವದೆಹಲಿಯಲ್ಲಿ ನಡೆಯಲಿದೆ.

You may have missed