ಜೀವರಕ್ಷಣೆಗೆ ನೆರವಾಗುವ -‘ಮೈ-ಸ್ಮಾರ್ಟ್-ಗಾಡಿ’

ಅಪಘಾತ ಸಂದರ್ಭದಲ್ಲಿ ಜೀವರಕ್ಷಣೆಗೆ ನೆರವಾಗುವ ಆಪ್ ಒಂದನ್ನು ಐಟ್ರಾನ್ ಟೆಕ್ನಾಲಜಿ ಸಂಸ್ಥೆ ಪರಿಚಯಿಸಿದೆ. ರಸ್ತೆಯಲ್ಲಿ ಓಡಾಡುವ ವೇಳೆ ಅಪಘಾತವಾದರೆ ಈ ಆಪ್ ತಕ್ಷಣವೇ ಬಂಧು-ಮಿತ್ರರಿಗೆ, ಹಿತೈಷಿಗಳಿಗೆ ಹಾಗೂ ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ರವಾನಿಸುತ್ತದೆ.
ಈ ಸಂದೇಶದ ಮೂಲಕ ಅಪಘಾತದ ಸ್ಥಳವನ್ನು ಪೊಲೀಸರಾಗಲಿ, ಬಂಧು-ಮಿತ್ರರಾಗಲಿ ಟ್ರೇಸ್ ಮಾಡಲು ಸುಲಭ ಸಾಧ್ಯವಿದೆ. ಸ್ಮಾರ್ಟ್ ಫೋನ್ ಇದ್ದರೆ ಸಾಕು, ‘ಮೈ-ಸ್ಮಾರ್ಟ್-ಗಾಡಿ’ ಎಂಬ ಆಪ್ ನ್ನು ಉಚಿತವಾಗಿ ಡೌನ್ ಲೋಡ್ ಮಾಡಬಹುದು. 5 ವರ್ಷಗಳ ನಿರಂತರ ಸಂಶೋಧನೆ ನಂತರ ಐಟ್ರಾನ್ ಟೆಕ್ನಾಲಜಿ ಸಂಸ್ಥೆ ಈ ‘ಮೈ-ಸ್ಮಾರ್ಟ್-ಗಾಡಿ’ ಎಂಬ ಆಪ್ ನ್ನು ಪರಿಚಯಿಸಿದೆ.
ಈ ಆಪ್ ಬಹುಪಯೋಗಿಯಾಗಿದ್ದು, ಪ್ರಯಾಣದ ದೂರವನ್ನು ತಿಳಿಸುತ್ತದೆ. ಇದು ಕಾರು ಹಾಗೂ ಘನ ವಾಹನ ಚಾಲಕರಿಗೂ ನೆರವಾಗುವ ರೀತಿಯಲ್ಲಿ ಸಿದ್ಧಗೊಂಡಿದೆ. ವಾಹನದ ಬಿಡಿಭಾಗಗಳು ಎಲ್ಲಿ ಸಿಗುತ್ತವೆ, ಸೇವಾ ಕೇಂದ್ರಗಳು ಎಲ್ಲಿವೆ ಎಂಬಿತ್ಯಾದಿ ಮಾಹಿತಿಗಳನ್ನು ಒದಗಿಸುವ ರೀತಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಐಟ್ರಾನ್ ಟೆಕ್ನಾಲಜಿಯ ಮುಖ್ಯಸ್ಥ ಮಲ್ಲೇಶ್ ರೆಡ್ಡಿ ತಿಳಿಸಿದ್ದಾರೆ