ಕರಾವಳಿಯ ಹೆಸರಾಂತ ಮಹೇಶ್ ಟ್ರಾವೆಲ್ಸ್ ಮಾಲೀಕ ಸಾವಿಗೆ ಶರಣು

ಮಂಗಳೂರು: ಕರಾವಳಿ ಜಿಲ್ಲೆಯ ಹೆಸರಾಂತ ಮಹೇಶ್ ಬಸ್ ಟ್ರಾವೆಲ್ಸ್ ಮಾಲೀಕ ಪ್ರಕಾಶ್ ಶೇಖ ಅವ್ರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮಂಗಳೂರಿನ ಕದ್ರಿ ಕಂಬಳ ರಸ್ತೆಯ ಅಪಾರ್ಟ್ಮೆಂಟ್’ನಲ್ಲಿ ಪ್ರಕಾಶ್ ಶೇಖ ಅವರ ಮೃತ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಕಾಶ್ ಅವರಿಗೆ 43 ವರ್ಷ ವಯಸ್ಸಾಗಿದೆ. ಖಾಸಗಿ ಸಾರಿಗೆ ಸಂಸ್ಥೆಯನ್ನು ಕಟ್ಟಿ ಅನೇಕರಿಗೆ ಉದ್ಯೋಗ ನೀಡಿದ್ದ ಪ್ರಕಾಶ್ ಶೇಖ ಅವರು ನೂರಕ್ಕೂ ಅಧಿಕ ಬಸ್​ಗಳನ್ನು ಹೊಂದಿದ್ದರು.

ಪ್ರಕಾಶ್ ಅವರ ಸಾವಿನ ಸುದ್ದಿ ತಿಳಿದ ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

You may have missed