ಕಾಶ್ಮೀರ ; ಪ್ರವಾಸಿಗರ ಸ್ಪರ್ಗವಾದ ಹಿಮದ ರಾಶಿ

0
snowfall-1

ಪ್ರವಾಸಿಗರ ಸ್ಪರ್ಗ ಜಮ್ಮು ಕಾಶ್ಮೀರ ನಿಜಕ್ಕೂ ಇದೀಗ ಪ್ರವಾಸಿಗರಿಗೆ ಸ್ಪರ್ಗವಾಗಿಯೇ ಪರಿಣಮಿಸಿದೆ. ದೇಶದೆಲ್ಲೆಡೆ ಬಿಸಿ ಧಗೆಯಿಂದ ಜನತೆ ಕಂಗಾಲಾಗಿದ್ದರೆ, ಜಮ್ಮು ಕಾಶ್ಮೀರದಲ್ಲಿ ಮಾತ್ರ ಹಿಮದ ರಾಶಿ ಮನಸ್ಸಿಗೆ ಮುದ ನೀಡುತ್ತಿದೆ.

ಒಂದೇ ಸಮನೆ ಸುರಿಯುತ್ತಿರುವ ಹಿಮಮಳೆಯಿಂದಾಗಿ ಇಲ್ಲಿನ ಗಡಿ ಭಾಗದ ಜನತೆ ಚಳಿಯಿಂದ ನಡುಗುವಂತಾಗಿದೆ. ದೇಶಾದ ಹಲವೆಡೆ ಬಿಸಿ ತಾಪಾಮಾನ ದಿನದಿಂದದಿನಕ್ಕೆ ಏರಿಕೆಯಾಗುತ್ತಿದ್ದರೂ, ಕಣಿವೆ ರಾಜ್ಯದಲ್ಲಿ ತಣ್ಣನೆಯ ವಾತಾವರಣ ಕಂಡು ಬರುತ್ತಿರುವುದು ಪ್ರವಾಸಿಗರಿಗೆ ಹೊಸ ಲೋಕವನ್ನೇ ತೆರೆದಿಡುವಂತೆ ಮಾಡಿದೆ.

ಇದೀಗ ಸೂರ್ಯನ ತಾಪ ಪ್ರಕರವಾಗಿರುವುದರಿಂದ ಮಂಜು ಕರಗುತ್ತಿದ್ದು, ಇಲ್ಲಿನ ನದಿಗಳು ತುಂಬಿ ಹರಿಯುತ್ತಿದೆ ಎನ್ನುತ್ತಾರೆ ಪ್ರವಾಸಿಗರು. ಒಟ್ಟಾರೆ ಭುವಿಯನ್ನು ಆವರಿಸಿರುವ ಮಂಜು, ನೋಡುಗರಿಗೆ ಭೂತಾಯಿ ಬಿಳಿ ಸೀರೆ ಉಟ್ಟಂತೆ ಭ್ರಮೆಯನ್ನುಂಟು ಮಾಡುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ…

Leave a Reply

Your email address will not be published. Required fields are marked *