ಚೀನಾ ವಿರುದ್ಧ ಭಾರತಕ್ಕೆ 6-2 ಭರ್ಜರಿ ಜಯ; ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ನಾಲ್ಕನೇ ಗೆಲುವು

0
India-Hockey-Womens-Asian-Champions-Trophy-2026

ಭೋಪಾಲ್: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಚೀನಾ ವಿರುದ್ಧ ಭಾರತ 6-2 ಗೋಲುಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಸತತ ನಾಲ್ಕನೇ ಜಯ ತನ್ನದಾಗಿಸಿಕೊಂಡಿದೆ.

ಭಾರತದ ಪರ ದೀಪಿಕಾ ಅಮೋಘ ಪ್ರದರ್ಶನ ನೀಡಿ ಹ್ಯಾಟ್ರಿಕ್ ಗೋಲು ಬಾರಿಸಿದರು. ಲಾಲ್ರೆಮ್ಸಿಯಾಮಿ, ನೇಹಾ ಮತ್ತು ಸಾಕ್ಷಿ ರಾಣಾ ತಲಾ ಒಂದು ಗೋಲು ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಚೀನಾ ಪರ ಹಾಂಗ್ ಯಂಗ್ಯೂನ್ ಮತ್ತು ಚೆನ್ ಟಾಂಗ್ ತಲಾ ಒಂದು ಗೋಲು ದಾಖಲಿಸಿದರು.

ಇದಕ್ಕೂ ಮೊದಲು ಭಾರತ ಥಾಯ್ಲೆಂಡ್, ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ತಂಡಗಳನ್ನು ಸೋಲಿಸಿತ್ತು. ಸತತ ನಾಲ್ಕು ಗೆಲುವುಗಳೊಂದಿಗೆ ಭಾರತ ಟೂರ್ನಿಯಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದೆ.

ಇತರ ಪಂದ್ಯಗಳಲ್ಲಿ ಜಪಾನ್ ತಂಡ ಮಲೇಷ್ಯಾವನ್ನು 3-1 ಗೋಲುಗಳಿಂದ ಸೋಲಿಸಿದರೆ, ದಕ್ಷಿಣ ಕೊರಿಯಾ ಥಾಯ್ಲೆಂಡ್ ವಿರುದ್ಧ 1-0 ಗೋಲುಗಳ ಜಯ ಸಾಧಿಸಿತು.

Leave a Reply

Your email address will not be published. Required fields are marked *