IFFI 2026ಕ್ಕೂ ಮುನ್ನ ಸಿನಿಮಾ ಕಲೆ, ವ್ಯಾಕರಣ ಪರಿಚಯಿಸಿದ PIB-FTII ಕೋರ್ಸ್

0
International-Film-Festival-of-India-IFFI-Goa-2026-2

ಗೋವಾ: 57ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) 2026ಕ್ಕೂ ಮುನ್ನ, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಮತ್ತು ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ಸಹಯೋಗದಲ್ಲಿ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಮೂಹ ಸಂವಹನ ವಿದ್ಯಾರ್ಥಿಗಳಿಗಾಗಿ ಚಲನಚಿತ್ರ ಮೆಚ್ಚುಗೆ ಕೋರ್ಸ್ ಆಯೋಜಿಸಲಾಯಿತು.

ಕೋರ್ಸ್ ಉದ್ಘಾಟಿಸಿದ PIB ಮಹಾನಿರ್ದೇಶಕಿ ಸ್ಮಿತಾ ವತ್ಸ್ ಶರ್ಮಾ, ಸಿನಿಮಾವನ್ನು ಕೇವಲ ಮನರಂಜನೆಯಾಗಿ ನೋಡದೆ ಅದರ ವ್ಯಾಕರಣ, ತತ್ವಶಾಸ್ತ್ರ ಮತ್ತು ದೃಶ್ಯ ಭಾಷೆಯನ್ನು ಅರ್ಥಮಾಡಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು. ಚಲನಚಿತ್ರ ವರದಿಯಲ್ಲಿ ಕಲಾತ್ಮಕ ಮತ್ತು ತಾಂತ್ರಿಕ ಅಂಶಗಳಿಗೆ ಆದ್ಯತೆ ನೀಡುವಂತೆ ಪತ್ರಕರ್ತರಿಗೆ ಕರೆ ನೀಡಿದರು.

ಮಹೇಶ್ ಕುಮಾರ್ ಅವರು ಸಿನಿಮಾದ ಸಾಂಸ್ಕೃತಿಕ ಪ್ರಭಾವದಲ್ಲಿ ದೃಶ್ಯ ತಂತ್ರಗಳು ಮತ್ತು ತಂತ್ರಜ್ಞಾನದ ಪಾತ್ರವನ್ನು ವಿವರಿಸಿದರು. FTII ಅಧ್ಯಾಪಕರಾದ ಪ್ರೊ. ಡಾ. ಇಂದ್ರಾನಿಲ್ ಭಟ್ಟಾಚಾರ್ಯ ಮತ್ತು ಪ್ರೊ. ವೈಭವ್ ಅಬ್ನವೆ ಉಪನ್ಯಾಸ, ಪ್ರದರ್ಶನ ಹಾಗೂ ಚರ್ಚೆಗಳನ್ನು ನಡೆಸಿಕೊಟ್ಟರು.

‘ಸಿನಿಮಾದಲ್ಲಿ ಸಮಯ ಮತ್ತು ಸ್ಥಳ’, ‘ಅನಿಮೇಟೆಡ್ ಸಾಕ್ಷ್ಯಚಿತ್ರಗಳು’ ಮತ್ತು ‘ರಚನಾತ್ಮಕ ವಿಶ್ಲೇಷಣೆ’ ವಿಷಯಗಳು ಕೋರ್ಸ್‌ನಲ್ಲಿದ್ದವು. ಕೊನೆಯಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರ ವಿತರಿಸಲಾಯಿತು.

Leave a Reply

Your email address will not be published. Required fields are marked *